ಮಂಜೇಶ್ವರ :ಮೀಂಜ ಗ್ರಾಮ ಪಂಚಾಯತ್ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ
ಸೋಶಿಯಲ್ ಆಡಿಟ್ ಪಬ್ಲಿಕ್ ಹಿಯರಿಂಗ್ ತಾ.01-08-2024 ರಂದು ಬೆಳಗ್ಗೆ ಗಂಟೆ 10.30ಕ್ಕೆ ಪಂಚಾಯತ್ ಹಾಲಿನಲ್ಲಿ ನಡೆಯಿತು.ಮೀಂಜ ಪಂಚಾಯತ್ ಉಪಾಧ್ಯಕ್ಷರಾದ ಜಯರಾಮ ಬಲ್ಲಂಗುಡೇಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಪಂಚಾಯತ್ ಅಧ್ಯಕ್ಷೆ. ಸುಂದರಿ ಆರ್. ಶೆಟ್ಟಿ ಅವರು ಉದ್ಘಾಟಿಸಿದರು.
ಮೊಹಮ್ಮದ್ ಹನೀಫ್ ಪಿ.ಕೆ (ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ), . ಬಾಬು ಸಿ ಕುಳೂರ್ (ಅಧ್ಯಕ್ಷರು, ಕ್ಷೇಮಕಾರ್ಯ ಸ್ಥಾಯಿ ಸಮಿತಿ), ಸರಸ್ವತಿ (ಅಧ್ಯಕ್ಷರು, ಆರೋಗ್ಯ & ಶಿಕ್ಷಣ ಸ್ಥಾಯಿ ಸಮಿತಿ), ಅಶ್ವಿನಿ ಎಂ.ಎಲ್ (ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರು) ಹಾಗು ಸೋಶಿಯಲ್ ಆಡಿಟ್ BRP .ರಾಘವನ್ ಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪಂಚಾಯತ್ ಕಾರ್ಯದರ್ಶಿ . ನಾರಾಯಣ ಕೆ ಅವರು ಯೋಜನೆಯ ವಿವರಣೆ ನೀಡಿದರು. ಕುಮಾರಿ.ಭವ್ಯ ಸೋಶಿಯಲ್ ಆಡಿಟ್ ವರದಿ ಮಂಡಿಸಿದರು. ಮಂಜೇಶ್ವರ ಬ್ಲಾಕ್ JBDO(EGS) ಧನೆಷ್ ದಾಮೋದರನ್ ಆಡಿಟ್ ಸಂದೇಹಗಳಿಗೆ ವಿವರಣೆ ನೀಡಿದರು.ಪಂಚಾಯತ್ ಸದಸ್ಯರುಗಳಾದ ನಾರಾಯಣ ತುಂಗ, ಕುಸುಮ ಮೋಹನ್, ಚಂದ್ರಶೇಖರ ಕೆ, ಮಿಸಿರಿಯಾ ಎಂ. ಕುಂಞ, ಜನಾರ್ಧನ ಪೂಜಾರಿ ಹಾಗೂ ಕುಟುಂಬಶ್ರೀ ಅಧ್ಯಕ್ಷೆ ಶಾಲಿನಿ ಬಿ. ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಮಂಜೇಶ್ವರ ಬ್ಲಾಕ್ ಇಂಜಿನಿಯರ್ ಝಹೀನ್ ಅಲಿ, ಪಂಚಾಯತ್ ಉದ್ಯೋಗಸ್ಥರಾದ ಪ್ರೀತಿ ಕೆ, ರಶ್ಮಿ ಶೆಟ್ಟಿ, ಅನಿತಾ ಎಂ ಹಾಗು ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರು, ಫಲಾನುಭವಿಗಳು ಉಪಸ್ಥಿತರಿದ್ದ ಈ ಕಾರ್ಯಕ್ರಮಕ್ಕೆ NREGS AE ಅಜಿತ್ ಶೆಟ್ಟಿ ಸ್ವಾಗತಿಸಿ, ಗ್ರಾಮ ವಿಸ್ತರಣಾ ಅಧಿಕಾರಿ . ಕಿರಣ್ ಶಂಕರ್ ವಂದಿಸಿದರು.