ಜೋಡುಕಲ್ಲು: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ, ಶ್ರೀ ಗಣೇಶೋತ್ಸವ ಸಮಿತಿ ರಚನಾ ಸಭೆ

Share with

ಉಪ್ಪಳ : ಸೇವಾಭಾರತಿ (ರಿ)ಜೋಡುಕಲ್ಲು ಇದರ ಆಶ್ರಯದಲ್ಲಿ 35 ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಹಾಗೂ ಶ್ರೀ ಗಣೇಶೋತ್ಸವ ಸಮಿತಿ ರಚನಾ ಸಭೆ ಇತ್ತೀಚೆಗೆ ಜೋಡುಕಲ್ಲು ತಪೋವನದಲ್ಲಿ ಜರಗಿತು.

ಸೇವಾಭಾರತಿಯ ಉಪಾಧ್ಯಕ್ಷ  ಕೃಷ್ಣ ಅಟ್ಟೆಗೋಳಿ ಯವರು ಸಭೆಯ ಅಧ್ಯಕ್ಷತೆ ವಹಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಜೇಶ್ವರ ತಾಲೂಕು ಕಾರ್ಯಕಾರಿಣಿ ಸದಸ್ಯ ನಟರಾಜ ಮಾಸ್ಟರ್ ರವರು ಸಭೆಯಲ್ಲಿ ಉಪಸ್ಥಿತರಿದ್ದರು. ಸೇವಾಭಾರತಿಯ ಸಂಚಾಲಕರಾದ ಸದಾನಂದ ಶೆಟ್ಟಿ ಕೊಮ್ಮOಡ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಭೆಯಲ್ಲಿ ನೂತನ ಉತ್ಸವ ಸಮಿತಿಯನ್ನು ರಚಿಸಲಾಯಿತು.
  ನೂತನ ಸಮಿತಿಯ ಅಧ್ಯಕ್ಷರಾಗಿ ಪ್ರೊ.  ಪಿ. ಎನ್. ಮೂಡಿತ್ತಾಯ ಪಾಂಡ್ಯಡ್ಕ, ಕಯ್ಯಾರು, ಪ್ರಧಾನ ಕಾರ್ಯದರ್ಶಿಯಾಗಿ  ಪ್ರಕಾಶ್ ತಪೋವನ, ಕೋಶಾಧಿಕಾರಿಯಾಗಿ ಅಜಿತ್ ಶೆಟ್ಟಿ ಕಳ್ಳಿಗೆ, ಉಪಾಧ್ಯಕ್ಷರುಗಳಾಗಿ ಗಣೇಶ್ ಆಳ್ವ ಮಾಡನಮನೆ, ಕಯ್ಯಾರು, ಆನಂದ A. K. ಅಟ್ಟೆಗೋಳಿ, ದಿನೇಶ್ ಟೈಲರ್ ಅಮ್ಮೆನಡ್ಕ, ಜನಾರ್ಧನ ಶೆಟ್ಟಿ ಪೊನ್ನೆತೋಡು, ಕಾರ್ಯದರ್ಶಿ ಗಳಾಗಿ ಪ್ರೇಮ್ ಕಾಂತ್ ಶೆಟ್ಟಿ ದೇರಂಬಳ, ನಿಖಿಲ್ ಸುಲಾಯ ಪರಂಬಳ, ದುರ್ಗಾಪ್ರಸಾದ್ ಪಟ್ಲ, ಮನೋಜ್ ಸಾಂತ್ಯೋ ಡು, ಕಾರ್ಯಾಲಯ ಕಾರ್ಯದರ್ಶಿಗಳಾಗಿ ಹರೀಶ್ ಆಳ್ವ ದೇರಂಬಳ, ಪ್ರವೀಣ್ ಪಟ್ಲ,ಹರ್ಷಿತ್ ಅರಿಯಾಳ,ಅಕ್ಷಯ್ ನವೋದಯನಗರ , ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಚಂದ್ರಹಾಸ ಪೊನ್ನೆತೋಡು,ಜಯರಾಮ ಅಟ್ಟೆಗೋಳಿ, ರಾಜೇಂದ್ರ ಪಟ್ಲ, ಪ್ರಸನ್ನ ಅಟ್ಟೆಗೋಳಿ, ಕ್ರೀಡಾ ಕಾರ್ಯದರ್ಶಿಗಳಾಗಿ ಪ್ರಜ್ವಲ್ ಪಟ್ಲ, ಗಿರೀಶ್ ಶೆಟ್ಟಿ ಓಪತಿಮೂಲೆ,ಶೇಖರ ಅರಿಯಾಳ, ದಿನಕರ ಕಯ್ಯಾರು ಗೌರವ ಸಲಹೆಗಾರರಾಗಿ  ಕೆ. ಪಿ. ನಾರಾಯಣ ಪಟ್ಲ, ರವಿರಾಜ್ ನಾಯ್ಕ್ ಗುಂಡಿಬೈಲು, ವೆಂಕಪ್ಪ ಮಾಸ್ಟರ್ ಕಯ್ಯಾರು, ಬಾಲಕೃಷ್ಣ ಮಾಸ್ಟರ್ ಅಟ್ಟೆಗೋಳಿ,ಸದಾನಂದ K. G. ಅಟ್ಟೆಗೋಳಿ ಹಾಗೂ ಮಾತೃ ಸಮಿತಿ ಸದಸ್ಯರಾಗಿ ಶಾರದಾ D. B. ಜೋಡುಕಲ್ಲು,ಶೋಭಾ ರಘುನಾಥ್ ಜೋಡುಕಲ್ಲು, , ಕುಶಲ ಮಂಜಲ್ತೋಡಿ, ಜೋಡುಕಲ್ಲು,  ಅಖಿಲ ಶಶಾಂಕ್ ಜೋಡುಕಲ್ಲು ಇವರನ್ನು ಆಯ್ಕೆ ಮಾಡಲಾಯಿತು.
  ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಹಾಗೂ ಶ್ರೀ ಗಣೇಶೋತ್ಸವವನ್ನು ವಿವಿಧ ಧಾರ್ಮಿಕ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
  ಸೇವಾಭಾರತಿಯ ಪ್ರಧಾನ ಕಾರ್ಯದರ್ಶಿಯಾದ ಶಿವಪ್ರಸಾದ್ ಶೆಟ್ಟಿ ಯವರು ಸ್ವಾಗತಿಸಿದರು. ಕಾರ್ಯದರ್ಶಿಯರಾದ ಹರೀಶ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು ಲೋಕೇಶ್ ನೋಂಡ ಧನ್ಯವಾದವಿತ್ತರು.


Share with

Leave a Reply

Your email address will not be published. Required fields are marked *