ಬಿದ್ದು ಸಿಕ್ಕಿದ ಬೆಲೆ ಬಾಳುವ ಮೊಬೈಲ್‌ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪತ್ರಕರ್ತ

Share with

ಮಂಜೇಶ್ವರ: ಮೂಲತಃ ಬಾಯಾರು ಪೆರೋಡಿ ನಿವಾಸಿ ಇದೀಗ ಮಂಗಳೂರಿನ‌ ಬೆಂದೂರ್ ವೆಲ್ ನಲ್ಲಿ ಉದ್ಯಮಿಯಾದ ಪಿ.ಉಮೇಶ್ ರೈ ಅವರ ಬೆಲೆ ಬಾಳುವ ಮೊಬೈಲ್ ಕಳೆದು ಹೋಗಿದ್ದು ಇದು ಲಭಿಸಿದ ಪತ್ರಕರ್ತನೋರ್ವ ಪ್ರಾಮಾಣಿಕವಾಗಿ ವಾರೀಸುದಾರರಿಗೆ ವಿತರಿಸಿದ್ದು ಪ್ರಶಂಸನೆಗೆ ಪಾತ್ರವಾಗಿದೆ.
ಜಯಕಿರಣ ಪತ್ರಿಕೆಯ ಕಾಸರಗೋಡು ಜಿಲ್ಲಾ ವರದಿಗಾರ, ಯುವ ಸಂಘಟಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮುಂದಾಳು ಮಂಜೇಶ್ವರದ ರತನ್ ಕುಮಾರ್ ಹೊಸಂಗಡಿ ಬಿದ್ದು ಸಿಕ್ಕಿದ ಮೊಬೈಲನ್ನು ಸಕಾಲದಲ್ಲಿ ವಾರೀಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ರವಿವಾರ (ನಿನ್ನೆ) ಸಂಜೆ ಪುತ್ತೂರಿನಿಂದ ಉಪ್ಪಳಕ್ಕೆ ಬರುವ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ರತನ್ ಕುಮಾರ್‌ ಅವರು ತಮ್ಮ ತಾಯಿಯೊಂದಿಗೆ ಸಂಜೆಯ ಬಸ್ಸಿಗೆ ಮಂಜೇಶ್ವರಕ್ಕೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಉಪ್ಪಳ ಸಮೀಪದ ಕೈಕಂಬಕ್ಕೆ ತಲುಪಿದ ಬಳಿಕ ಎದುರಿನ ಸೀಟಿನಲ್ಲಿದ್ದ ಮೊಬೈಲ್ ಗೋಚರಿಸಿದೆ. ಬಳಿಕ ಸ್ವಲ್ಪದರಲ್ಲೆ ಈ ಮೊಬೈಲ್ ಗೆ ಕಾಲ್ ಬಂದಿದ್ದು ಕಳೆದು ಕೊಂಡವರು ಬೇರೆಯವರ ಮೊಬೈಲ್ ನಿಂದ ಕರೆ ಮಾಡಿದ್ದರು. ಈ ವೇಳೆ ರತನ್ ಕುಮಾರ್ ತಮ್ಮ ಮನೆ ವಿಳಾಸ ತಿಳಿಸಿದ್ದು ಉಮೇಶ್ ರೈ ಅವರು ಸ್ವತಃ ಆಗಮಿಸಿ ಮೊಬೈಲ್ ಪಡೆದುಕೊಂಡಿದ್ದಾರೆ. ಮೊಬೈಲ್ ಸುಮಾರು 30 ಸಾವಿರ ಬೆಲೆಬಾಳುವಂತದ್ದೆಂದು ಉಮೇಶ್ ರೈಯವರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *