ಹೊಸದಿಲ್ಲಿ: ಮಹಿಳೆಯೊಬ್ಬಳು ಅಳುತ್ತಿದ್ದಳು ಎಂಬ ಕಾರಣಕ್ಕೆ ವರದಕ್ಷಿಣೆ ಕಿರುಕುಳವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.

2010ರಲ್ಲಿ ವಿವಾಹವಾಗಿದ್ದ ಮಹಿಳೆಗೆ ವರದಕ್ಷಿಣೆ ಕಿರುಕುಳ ಎದುರಾಗಿತ್ತು ಎಂದು ಆರೋಪಿಸಲಾಗಿತ್ತು. 2014ರಲ್ಲಿ ಆಕೆ ನಿಧನ ಹೊಂದಿದ್ದರು. ಏತನ್ಮಧ್ಯೆ, ಸಂತ್ರಸ್ತೆಗೆ ಕರೆ ಮಾಡಿದಾಗಲೆಲ್ಲ ಅಳುತ್ತಿದ್ದಳೆಂದು ಆಕೆ ಸಹೋದರಿ ಆಪಾದಿಸಿದ್ದರು. ಆದರೆ ಮಹಿಳೆಯ ಸಾವಿಗೆ ನ್ಯುಮೋನಿಯಾ ಕಾರಣವೆಂದು, ವರದಕ್ಷಿಣೆ ನೀಡಿರುವುದಕ್ಕೆ ಸಾಕ್ಷ್ಯಗಳು ಇಲ್ಲದಿರುವುದನ್ನು ಗಮನಿಸಿ ಮಹಿಳೆ ಪತಿ ಮತ್ತಾತನ ಕುಟುಂಬದ ವಿರುದ್ದದ ಪ್ರಕರಣ ವಜಾಗೊಳಿಸಲಾಯಿತು.




