ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಅಮಾನುಷವಾಗಿ ಅತ್ಯಾಚಾರಗೊಂಡು ಕೊಲೆಯಾದ ಸೌಜನ್ಯಳ ಸಾವಿಗೆ ನ್ಯಾಯ ದೊರಕಿಸುವ ಸಲುವಾಗಿ ಆ.15ರಂದು ಬೆಳ್ತಂಗಡಿ ತಾಲೂಕಿನ ಹಲವಡೆ ‘Justice for Soujanya’ ಸ್ಟಿಕ್ಕರ್ ಅಭಿಯಾನ ನಡೆಯಿತು.
ತಾಲೂಕಿನ ಹಲವು ಗ್ರಾಮಗಳಲ್ಲಿ ಜನರು ತಮ್ಮ ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿ ಸೌಜನ್ಯ ಪರ ಬೆಂಬಲ ಸೂಚಿಸಿದ್ದಾರೆ.