ಪೈವಳಿಕೆ: ಕಳಾಯಿ ನಿವಾಸಿ ಸಿಪಿಎಂ ಹಿರಿಯ ನೇತಾರ ಸಂಜೀವ ಶೆಟ್ಟಿ ರವರ ಪತ್ನಿ ಲೀಲಾವತಿ [71] ಅಲ್ಪ ಕಾಲದ ಅಸೌಖ್ಯದಿಂದ ನ.4ರಂದು ರಾತ್ರಿ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.


ಮೃತರು ಪತಿ, ಮಕ್ಕಳಾದ ಸುಜಾತ ಶೆಟ್ಟಿ, ಕಿಶೋರ್ ಕುಮಾರ್ ಶೆಟ್ಟಿ, ನ್ಯಾಯವಾದಿ ಅಶೋಕ್ ಕುಮಾರ್ ಶೆಟ್ಟಿ, ಅಳಿಯ ಸೀತಾರಾಮ ಶೆಟ್ಟಿ ಮಡ್ಯಂತಾರು, ಸೊಸೆಯಂದಿರಾದ ಸುಚಿತ್ರ ಶೆಟ್ಟಿ, ರಮ್ಯ ಶೆಟ್ಟಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಸಿಪಿಎಂ ಪೈವಳಿಕೆ ಲೋಕಲ್ ಕಮಿಟಿ ಹಾಗೂ ರೈತ ಸಂಘ ಮಂಜೇಶ್ವರ ಏರಿಯಾ ಸಮಿತಿ ಸಂತಾಪ ಸೂಚಿಸಿದೆ.




