ಕಲ್ಲಡ್ಕ: ಸ್ವಚ್ಚತೆಯ ಮೂಲಕ ಗ್ರಾಮ ಪಂಚಾಯತ್ ಕಣ್ಣು ತೆರೆಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ಶೌರ್ಯ ವಿಪತ್ತು ತಂಡ

Share with

ಕಲ್ಲಡ್ಕ: ಕಾಂಕ್ರೀಟ್ ರಸ್ತೆಯ ಸುತ್ತಮುತ್ತ ಗಿಡಗಳು ಗಂಟೆಗಳು ಬೆಳೆದು ನಿಂತು ಶಾಲಾ ಮಕ್ಕಳು ನಡೆದುಕೊಂಡು ಹೋಗಲು ಭಯಪಡುತ್ತಿದ್ದ, ನೋಡಲು ಕಾಲು ದಾರಿಯಾಗಿ ಕಾಣುತ್ತಿದ್ದ ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಪೂಪಾಡಿ ಕಲ್ಲು-ನಾರಂಕೋಡಿ ರಸ್ತೆಯ ಬಗ್ಗೆ ಸ್ಥಳಿಯರು ಅನೇಕ ಬಾರಿ ಪಂಚಾಯತಿಗೆ ಮನವಿ ನೀಡಿದರೂ ಸ್ಪಂದಿಸದೆ ಯಾವುದೇ ಕ್ರಮಗೊಳ್ಳದೆ ಇದ್ದು ಕಡೆಗೆ ಸ್ಥಳಿಯರಾದ ಮಹಮ್ಮದ್ ಹಮೀದು ಹಾಗು ಚರಣ್ ಇವರು ಯೋಜನೆಯ ಕಲ್ಲಡ್ಕ ಶೌರ್ಯ ವಿಪತ್ತು ತಂಡದವರಿಗೆ ಮನವಿ ನೀಡಿದ್ದು ತಕ್ಷಣ ಕಾರ್ಯಪ್ರವರ್ತರಾದ ಶೌರ್ಯ ತಂಡದವರು ರಸ್ತೆಯ ಎರಡು ಬದಿಯಲ್ಲಿ ಬೆಳೆದ ಗಿಡಗಳನ್ನು ಕಡಿದು ಸ್ವಚ್ಚತೆ ಮಾಡಿದರು.

ಶೌರ್ಯ ತಂಡದವರು ರಸ್ತೆಯ ಎರಡು ಬದಿಯಲ್ಲಿ ಬೆಳೆದ ಗಿಡಗಳನ್ನು ಕಡಿದು ಸ್ವಚ್ಚತೆ ಮಾಡಿದರು.

ಈ ರಸ್ತೆಯ ಒಂದು ಭಾಗವು ಬೋಳಂತೂರು ಗ್ರಾಮಕ್ಕೆ ಸೇರಿದ್ದು ಇನ್ನೊಂದು ಬದಿಯು ಗೋಳ್ತಮಜಲು ಗ್ರಾಮ ಪಂಚಾಯತಿಗೆ ಸೇರಿದ್ದು ಎರಡು ಪಂಚಾಯತಿನವರು ತಮಗೆ ಸಂಬಂಧ ಪಡೆದ ರೀತಿಯಲ್ಲಿ ರಸ್ತೆ ರಿಪೇರಿಗೆ ಮೀನವೇಶ ಎನಿಸುತ್ತಿದ್ದರು.

ಶೌರ್ಯ ತಂಡದ ಕಾರ್ಯಕ್ಕೆ ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸ್ವಚ್ಛತಾ ಕಾರ್ಯದಲ್ಲಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ ಕೊಳಕೀರು, ಶೌರ್ಯ ವಿಪತ್ತು ತಂಡದ ಅಧ್ಯಕ್ಷ ಮಾಧವ ಸಾಲಿಯಾನ್ ಕುದುರೆಬೆಟ್ಟು, ತಂಡದ ಸಂಯೋಜಕ ವಿದ್ಯಾ, ಕಲ್ಲಡ್ಕ ಒಕ್ಕೂಟ ಸೇವಾ ಪ್ರತಿನಿಧಿ ಗಣೇಶ್, ಶೌರ್ಯ ತಂಡ ಸದಸ್ಯರುಗಳಾದ, ವೆಂಕಪ್ಪ ಜಿ, ಮೌರೀಶ್, ರವಿಚಂದ್ರ ಜೋಗಿ, ರಮೇಶ್ ಕುದ್ರೆಬೆಟ್ಟು, ಸಂತೋಷ್ ಬೊಳ್ಪೋಡಿ, ಚಿನ್ನಾ ಕಲ್ಲಡ್ಕ, ಸತೀಶ್ ಮೇಸ್ತ್ರಿ, ಧನಂಜಯ ಕೊಳಕೀರು, ಸ್ಥಳೀಯರಾದ ಹಮೀದ್, ಚರಣ್ ಮೊದಲಾದವರು ಪಾಲ್ಗೊಂಡಿದ್ದರು.


Share with

Leave a Reply

Your email address will not be published. Required fields are marked *