ಬಂಟ್ವಾಳ :ಕಲ್ಲಡ್ಕ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ತ್ರೋಬಾಲ್ ಪಂದ್ಯಾಟವು ಬಂಟ್ವಾಳ ತಾಲೂಕಿನ ದೇವಮಾತ ಆಂಗ್ಲ ಮಾಧ್ಯಮ ಶಾಲೆ ಅಮ್ಟೂರು ಇಲ್ಲಿ ನಡೆಯಿತು.
ವಲಯ ದೈಹಿಕ ಶಿಕ್ಷಣ ನೋಡಲ್ ಅಧಿಕಾರಿ ಜಗದೀಶ್ ಮಾತನಾಡಿ ಕ್ರೀಡೆಯು ಒಂದು ಜೀವನದ ಭಾಗ .ತರಬೇತಿಯು ನಿರಂತರವಾಗಿದ್ದಾಗ ಮಾತ್ರ ಯಶಸ್ಸು ಸಾಧ್ಯ, ಕ್ರೀಡೆಯಲ್ಲಿ ಸೋಲು ಗೆಲುವು ಇದ್ದದ್ದೇ, ಭಾಗವಹಿಸುವುದು ಮುಖ್ಯ ಎಂದರು.
ಶಾಲಾ ಸಂಚಾಲಕರಾದ ಫಾ.ಅನಿಲ್ ಕೆನ್ಯೂಟ್ ಡಿ ಮೆಲ್ಲೊ ಪಂದ್ಯಾಟದ ಕ್ರೀಡಾಂಗಣವನ್ನು ಉದ್ಘಾಟಿಸಿ ಪಂದ್ಯಾಟದಲ್ಲಿ ಭಾಗವಹಿಸಿದ ತಂಡದ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿಸೋಜ ,ಶಿಕ್ಷಕ- ರಕ್ಷಕ ಸಂಘದ ಉಪಾಧ್ಯಕ್ಷರಾದ ಜನಾರ್ಧನ್ ಕೆ. ವಿ ,ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಆ್ಯನಿ ಡಿ ಸೋಜಾ,ದೈಹಿಕ ಶಿಕ್ಷಕರ ಗ್ರೇಡ್-2 ತಾಲೂಕು ಸಂಘದ ಅಧ್ಯಕ್ಷರಾದ ಇಂದುಶೇಖರ್ ಕುಲಾಲ್,ಹಾಗೂ ಕಲ್ಲಡ್ಕ ವಲಯದ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕರಕ್ಷಕ ಕಾರ್ಯಕಾರಿ ಸಮಿತಿಯ ಸದಸ್ಯರುಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
14 ರ ವಯೋಮಾನದ ಬಾಲಕರ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಪ್ರಥಮ ಸ್ಥಾನ, ದೇವಮಾತ ಆಂಗ್ಲ ಮಾಧ್ಯಮ ಶಾಲೆ ಅಮ್ಟೂರು ದ್ವಿತೀಯ ಸ್ಥಾನ ,ಮತ್ತು ಬಾಲಕಿಯರ ವಿಭಾಗದಲ್ಲಿ ದೇವಮಾತ ಆಂಗ್ಲ ಮಾಧ್ಯಮ ಶಾಲೆ, ಅಮ್ಟೂರು ಪ್ರಥಮ ಸ್ಥಾನ ,ದ್ವಿತೀಯ ಸ್ಥಾನವನ್ನು ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆ, ಅಮ್ಟೂರು ಗಳಿಸಿತು.
17 ರ ವಯೋಮಾನದ ಬಾಲಕರ ವಿಭಾಗದಲ್ಲಿ ಬಾಲ ವಿಕಾಸ ಮಾಣಿ ಪ್ರಥಮ ಸ್ಥಾನ ,ದೇವಮಾತ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಮತ್ತು ಬಾಲಕಿಯರ ವಿಭಾಗದಲ್ಲಿ ಬಾಲವಿಕಾಸ ಮಾಣಿ ಪ್ರಥಮ, ದೇವಮಾತ ಆಂಗ್ಲ ಮಾಧ್ಯಮ ಶಾಲೆ ಅಮ್ಟೂರು ದ್ವಿತೀಯ ಸ್ಥಾನವನ್ನು ಗಳಿಸಿತು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಫಾ.ನವೀನ್ ಪ್ರಕಾಶ್ ಪಿಂಟೋ ರವರು ಸ್ವಾಗತಿಸಿ, ಶಿಕ್ಷಕಿಯಾರಾದ ಲಿನೆಟ್ ಮತ್ತು ಅರುಣಾ ವಂದಿಸಿ, ಶಿಕ್ಷಕಿಯಾರಾದ ಅನಿತಾ ಮತ್ತು ನಯನ ಕಾರ್ಯಕ್ರಮ ನಿರೂಪಿಸಿದರು.