
ಉಪ್ಪಳ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ವಿದ್ಯಾಸಂಸ್ಥೆಗಳಲ್ಲಿ ಮಂಜೇಶ್ವರ ಉಪಜಿಲ್ಲಾ ೬೨ನೇ ಶಾಲಾ ಕಲೋತ್ಸವಕ್ಕೆ ಕಳೆದ ನಾಲ್ಕು ದಿನಗಳಿಂದ ಜನಸಾಗರ ಹರಿದು ಬರುತ್ತಿದ್ದು, ಅಚ್ಚುಕಟ್ಟಾದ ವ್ಯವಸ್ಥೆಯಿಂದ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಅಧ್ಯಾಪಕರ ವೃಂದ, ರಕ್ಷಕರು, ವಿವಿಧ ಸಂಘ ಸಂಸ್ಥೆಗಳು, ಹಳೇ ವಿದ್ಯಾರ್ಥಿಗಳು ಹಾಗೂ ಊರವರ ಸಹಕಾರ ಯಶ್ವಸ್ವಿಗೆ ಕಾರಣವಾವಾಗಿದೆ ಎಂದು ಮಂಜೇಶ್ವರ ವಿದ್ಯಾಭಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಜಿತೇಂದ್ರ ರವರು ತಿಳಿಸಿದ್ದಾರೆ.


ಉಪಜಿಲ್ಲೆಯ ೧೧೨ ಶಾಲೆಗಳ ೪೫೮೪ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಗುರುವಾರ ೧೨ ವೇದಿಕೆಯಲ್ಲಿ ಯಕ್ಷಗಾನ, ನಾಟಕ, ನೃತ್ಯಗಳು ಮೊದಲಾದ ಕಾರ್ಯಕ್ರಮಗಳು ನಡೆದಿದೆ. ಶುಕ್ರವಾರ ಭರತ ನಾಟ್ಯ ಸಹಿತ ವಿವಿಧ ನೃತ್ಯಗಳು ನಡೆದು ಸಂಜೆ ೪ಕ್ಕೆ ಸಮಾರೋಪ ನಡೇಯಲಿದೆ. ಅಧ್ಯಕ್ಷತೆಯನ್ನು ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಸಮೀನ ಟೀಚರ್ ವಹಿಸುವರು. ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು.
ವಿವಿಧ ಗ್ರಾಮ ಪಂಚಾಯತ್ಗಳ ಅಧ್ಯಕ್ಷರುಗಳು, ಸದಸ್ಯರುಗಳು ಹಾಗೂ ವಿವಿಧ ವಲಯದ ಗಣ್ಯರಾದ ಜಯಂತಿ.ಕೆ, ಜಯಂತಿ, ಪಾಲಾಕ್ಷ ರೈ, ಅನಿತ.ಎಂ, ಕೇಶವ.ಎಸ್.ಆರ್, ಜನಾರ್ಧನ ಪೂಜಾರಿ.ಕೆ, ಅನಿತಶ್ರೀ, ಪ್ರೇಮ.ಎಸ್.ರಾವ್, ಅಶೋಕ್ ಭಂಡಾರಿ, ಗೀತಾ.ಎಂ, ದಿನೇಶ್.ವಿ, ನಾರಾಯಣ ದೇಲಂಪಾಡಿ, ವಿನೀಶ್.ವಿ.ಆರ್, ಡಾ.ಜಯಪ್ರಕಾಶ್ ನಾರಾಯಣ.ಟಿ, ಮಹಾಬಲೇಶ್ವರ ಭಟ್.ಇ.ಎಸ್, ಕೋಲಾರ್ ಸತೀಶ್ಚಂದ್ರ ಭಮ್ಡಾರಿ, ಕೆ.ಕೆ ಶೆಟ್ಟಿ, ವಿಜಯ ಕುಮಾರ್.ಪಿ, ಡಾ.ವಿನೋದ್ ಕುಮಾರ್, ಶಾಮ್ ಭಟ್ ಚೇವಾರ್, ಶಂಖರ ರಾವ್.ಕೆ, ಅಶೋಕ.ಎನ್, ವಿಜಯಶ್ರೀ.ಬಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿರುವರು.




