ನಿಂತು ಹೋಗಿದ್ದ ವಿಷ್ಣುವರ್ಧನ್ ಸಿನಿಮಾನ ರಿಲೀಸ್ ಮಾಡಲು ಮುಂದಾದ ಕಮಲ್ ಹಾಸನ್

Share with

ಕಮಲ್ ಹಾಸನ್ ಅವರು ನಿರ್ಮಾಣ ಹಾಗೂ ನಟನೆಯಲ್ಲಿ ಬ್ಯುಸಿ ಇದ್ದಾರೆ. ಈಗ ಅವರು ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. 1996ರಲ್ಲಿ ‘ಇಂಡಿಯನ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಇದಾದ ಬಳಿಕ ಅವರು ನಿರ್ದೇಶನಕ್ಕೆ ಇಳಿದರು. ಈ ಚಿತ್ರಕ್ಕೆ ‘ಮರುಧನಾಯಗಂ’ ಎಂದು ಶೀರ್ಷಿಕೆ ಇಡಲಾಗಿತ್ತು. ಈ ಸಿನಿಮಾದಲ್ಲಿ ಕಮಲ್ ಜೊತೆ ವಿಷ್ಣುವರ್ಧನ್ ಕೂಡ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ಎರಡು ವರ್ಷ ನಡೆಯಿತು. ನಂತರ ಸಿನಿಮಾ ರಿಲೀಸ್ ಆಗದೆ ನಿಂತು ಹೋಯಿತು. ಈಗ ಇದನ್ನು ರಿಲೀಸ್ ಮಾಡುವ ಬಗ್ಗೆ ಕಮಲ್ ಹಾಸನ್ ಯೋಚಿಸಿದ್ದಾರೆ.

‘ಮರುಧನಾಯಗಂ’ ಸಿನಿಮಾ ಆಗಿನ ಕಾಲಕ್ಕೆ ಸಾಕಷ್ಟು ಸದ್ದು ಮಾಡಿತ್ತು. ಮದ್ರಾಸ್ ಫಿಲ್ಮ್ ಸಿಟಿಯಲ್ಲಿ  ಈ ಸಿನಿಮಾದ ಲಾಂಚ್ ನಡೆಯಿತು. ಕ್ವೀನ್ ಎಲಿಜಬೆತ್ ಹಾಗೂ ಅಂದಿನ ತಮಿಳುನಾಡು ಸಿಯಂ ಕರುಣಾನಿಧಿ ಅತಿಥಿಯಾಗಿ ಬಂದಿದ್ದರು. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿತ್ತು. ವಿಷ್ಣುವರ್ಧನ ಕೂಡ ಸಿನಿಮಾದಲ್ಲಿ ಇದ್ದರು. ಅವರು ವಾಜಿದ್ ಖಾನ್ ಹೆಸರಿನ ಪಾತ್ರ ಮಾಡಿದ್ದರು.

ಈ ಚಿತ್ರಕ್ಕೆ ಎರಡು ವರ್ಷ ಶೂಟಿಂಗ್ ಮಾಡಲಾಯಿತು. ಆದರೆ, ಇದಕ್ಕೆ ಹಣ ಹಾಕಿದವರಲ್ಲಿ ಒಬ್ಬರಾದ ಹಾಲಿವುಡ್ ನಿರ್ಮಾಣ ಸಂಸ್ಥೆ ಹಿಂದಕ್ಕೆ ಸರಿಯಿತು. ಚಿತ್ರದ ಬಜೆಟ್ 50 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿತ್ತು. ಆಗಿನ ಕಾಲದಲ್ಲಿ ಟಿಕೆಟ್ ಬೆಲೆ 10-20 ರೂಪಾಯಿ ಇತ್ತು. ಈ ಟಿಕೆಟ್ ಬೆಲೆಯಲ್ಲಿ ಬಜೆಟ್ ರಿಕವರಿ ಮಾಡೋದು ಅಸಾಧ್ಯ ಎನಿಸಿತ್ತು. ವಿಶೇಷ ಎಂದರೆ ಈ ಸಿನಿಮಾಗೆ ನಾಯಕಿ ಆಗಿ ಐಶ್ವರ್ಯಾ ರೈ ಅಥವಾ ‘ಟೈಟಾನಿಕ್’ ಸಿನಿಮಾ ನಾಯಕಿ ಕೇಟ್ ವಿನ್ಸ್ಲೆಟ್ನ ಆಯ್ಕೆ ಮಾಡುವ ಆಲೋಚನೆಯಲ್ಲಿ ಕಮಲ್ ಇದ್ದರು. ಈ ಚಿತ್ರದ ಪ್ರೀ ಪ್ರೊಡಕ್ಷನ್ಗೆ ಕಮಲ್ ಸಾಕಷ್ಟು ಹಣ ವ್ಯಯ ಮಾಡಿದ್ದರು.

ಈ ಸಿನಿಮಾ ಮುಂದುವರಿಯಲೇ ಇಲ್ಲ. ಈ ಸಿನಿಮಾ ನಿಂತಿದೆ ಎಂದು ಘೋಷಣೆ ಮಾಡಿದರು. ಈ ಸಿನಿಮಾನ ಪೂರ್ಣಗೊಳಿಸಲು ಅವರು ಹಲವು ಬಾರಿ ಪ್ರಯತ್ನಿಸಿದರೂ ಯಶಸ್ಸು ಕಾಣಲಿಲ್ಲ. ಈ ಸಿನಿಮಾ ಬರೋದೇ ಇಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಈಗ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಈ ಸಿನಿಮಾನ ಪೂರ್ಣಗೊಳಿಸುವ ಎಲ್ಲಾ ಸಾಧ್ಯತೆ ಇದೆ’ ಎಂದು ಕಮಲ್ ಹೇಳಿದ್ದಾರೆ.


Share with

Leave a Reply

Your email address will not be published. Required fields are marked *