ಮೈಸೂರು ದಸರಾ ಕ್ರೀಡಾಕೂಟದಲ್ಲಿ ಕಂಬಳ ಸ್ಪರ್ಧೆ: ಡಿಕೆ ಶಿವಕುಮಾರ್ ಘೋಷಣೆ!

Share with

ಮುಂದಿನ ವರ್ಷದಿಂದಲೇ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಕಂಬಳ ಸ್ಪರ್ಧೆ ಆಯೋಜನೆ ಮಾಡುವುದಾಗಿ ಡಿಸಿಎಂ ಡಿಕೆ ಶಿವಕುಮಾರ್​ ಘೋಷಣೆ ಮಾಡಿದ್ದಾರೆ.

ಮಂಗಳೂರು ನಗರದ ಗುರುಪುರ ಕಂಬಳದಲ್ಲಿ ಭಾಗಿಯಾಗಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಮೈಸೂರು ಜಿಲ್ಲಾ ಸಚಿವರ ಜೊತೆಗೆ ಮಾತುಕತೆ ನಡೆಸುತ್ತೇನೆ. ದಸರಾ ಕ್ರೀಡಾಕೂಟದಲ್ಲಿ ಪ್ರತಿವರ್ಷ ಕಂಬಳ ನಡೆಯಬೇಕು. 3 ಎಕರೆ ಜಾಗವನ್ನು ನಿಗದಿಪಡಿಸಿ ಶಾಶ್ವತ ಕಂಬಳ ಕೆರೆ ನಿರ್ಮಿಸಬೇಕು. ಇದಕ್ಕಾಗಿ ಅನುದಾನ ತೆಗೆದಿಡಲು ವ್ಯವಸ್ಥೆ ಮಾಡಿಸುತ್ತೇನೆ. ಕಂಬಳ ಅಂತಾರಾಷ್ಟ್ರೀಯ ಕ್ರೀಡೆಯಾಗಿ ಬೆಳೆಯಬೇಕು ಎಂದು ಹೇಳಿದ್ದಾರೆ


Share with

Leave a Reply

Your email address will not be published. Required fields are marked *