ಕಾಣತ್ತೂರು: ಮನೆಯಂಗಳದಿಂದ ಹಾಡಹಗಲೇ ಕೋಳಿಯನ್ನು ಕಚ್ಚಿ ಕೊಂಡೊಯ್ದ ಚಿರತೆ..!

Share with

ಕಾಸರಗೋಡು : ಕಾನತ್ತೂರು ಬಳಿಯ ಇರಿಯಣ್ಣಿಯಲ್ಲಿ ಚಿರತೆ ಮತ್ತೆ ಊರಿಗಿಳಿದಿದೆ. ಇರಿಯಣ್ಣಿ ಕುಟ್ಯಾನ ಎಂಬಲ್ಲಿ ಶಿವಪ್ರಸಾದ್‌ ಎಂಬವರ ಮನೆಯಂಗಳಕ್ಕೆ ಸೆ.24ರಂದು ಬೆಳಿಗ್ಗೆ ಬಂದ ಚಿರತೆ ಸಾಕು ಕೋಳಿಯೊಂದನ್ನು ಕಚ್ಚಿ ಕೊಂಡೊಯ್ದಿದೆ. ಬೆಳಿಗ್ಗೆ 10.30ರ ವೇಳೆಗೆ ಈ ಘಟನೆ ನಡೆದಿದೆ. ಮನೆಯಂಗಳದಲ್ಲಿ ಸಾಕುವ ಕೋಳಿ, ಸಾಕು ನಾಯಿಗಳಿದ್ದು, ಈ ಪೈಕಿ ಕೋಳಿಯೊಂದನ್ನು ಕಚ್ಚಿ ಚಿರತೆ ಕಾಡಿಗೆ ಮರಳಿದೆ.

ಚಿರತೆ ಮನೆಯಂಗಳಕೆ ಧಾವಿಸಿ ಕೋಳಿ ಕೊಂಡೊಯ್ಯವಾಗ ಪಕ್ಕದ ಮನೆಯಂಗಳದಲ್ಲಿ ಪುಟ್ಟ ಮಕ್ಕಳು ಆಟವಾಡುತ್ತಿದ್ದರು ಎನ್ನಲಾಗಿದೆ. ಮಾಹಿತಿ ದೊರೆತು ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಪ್ರತಿನಿಧಿಗಳು ಚಿರತೆಯ ಹೆಜ್ಜೆಜಾಡು ಗುರುತಿಸಿದ್ದಾರೆ. ಈ ಪರಿಸರದಲ್ಲಿ ಈ ಹಿಂದೆಯೂ ಚಿರತೆ ಪ್ರತ್ಯಕ್ಷವಾಗಿತ್ತು. ಆದರೆ ಇತ್ತೀಚಿನ ಕೆಲ ತಿಂಗಳಲ್ಲಿ ಚಿರತೆ ಕಂಡುಬಂದಿರಲಿಲ್ಲ. ಚಿರತೆ ಮನೆಯಂಗಳಕ್ಕೆ ಹಾಡು ಹಗಲೇ ಬಂದ ಹಿನ್ನೆಲೆಯಲ್ಲಿ ಈ ಪ್ರದೇಶಗಳ ಬೋನು ಇರಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *