ಆಸೀಸ್ ಪ್ರವಾಸಕ್ಕೆ ಭಾರತ ತಂಡಕ್ಕೆ ಆಯ್ಕೆಯಾದ ಕನ್ನಡತಿ ಶ್ರೇಯಾಂಕ ಪಾಟೀಲ್

Share with

ಬೆಂಗಳೂರು: ಈ ಬಾರಿಯ ವನಿತಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಅವರು ಮತ್ತೆ ಭಾರತ ತಂಡದ ಕರೆ ಪಡೆದಿದ್ದಾರೆ. ಗಾಯದ ಕಾರಣದಿಂದ 2024ರ ಟಿ20 ವಿಶ್ವಕಪ್ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದಿರದ ಶ್ರೇಯಾಂಕ ಇದೀಗ 2026 ರ ಮಹಿಳಾ ಟಿ20 ವಿಶ್ವಕಪ್‌ಗೆ ಕೆಲವು ತಿಂಗಳುಗಳ ಮೊದಲು ತಂಡಕ್ಕೆ ಹಿಂತಿರುಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಶ್ರೇಯಾಂಕ ಆಯ್ಕೆಯಾಗಿದ್ದಾರೆ.

ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ವೈಟ್-ಬಾಲ್ ತಂಡಗಳನ್ನು ಶನಿವಾರ (ಜ.18) ಘೋಷಿಸಲಾಗಿದೆ. ಶ್ರೇಯಾಂಕ ಪಾಟೀಲ್ ಜೊತೆಗೆ ಭಾರತಿ ಫುಲ್ಮಾಲಿ ಕೂಡಾ ತಂಡಕ್ಕೆ ಮರಳಿದ್ದಾರೆ. ಮೂರು ಟಿ 20ಐ ಮತ್ತು ಮೂರು ಏಕದಿನ ಪಂದ್ಯಗಳಿಗೆ ಪ್ರತ್ಯೇಕ ತಂಡಗಳನ್ನು ಘೋಷಿಸಿದ್ದು, ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿ ಮತ್ತು ಸ್ಮೃತಿ ಮಂಧಾನಾ ಅವರ ಉಪನಾಯಕಿಯಾಗಿ ಮುಂದುವರೆದಿದ್ದಾರೆ.

ಬಿಸಿಸಿಐ ನಂತರದ ದಿನಾಂಕದಲ್ಲಿ ಏಕೈಕ ಟೆಸ್ಟ್‌ಗೆ ತಂಡವನ್ನು ಹೆಸರಿಸಲು ಸಜ್ಜಾಗಿದೆ. ಪ್ರವಾಸದ ವೈಟ್-ಬಾಲ್ ಲೆಗ್ ಫೆಬ್ರವರಿ 15 ರಂದು ಮೊದಲ ಟಿ20ಐನೊಂದಿಗೆ ಎಸ್‌ಸಿಜಿಯಲ್ಲಿ ಪ್ರಾರಂಭವಾಗಲಿದ್ದು, ಮುಂದಿನ ಎರಡು ಪಂದ್ಯಗಳು ಫೆಬ್ರವರಿ 19 ಮತ್ತು 21 ರಂದು ಕ್ರಮವಾಗಿ ಮನುಕಾ ಓವಲ್ ಮತ್ತು ಅಡಿಲೇಡ್ ಓವಲ್‌ನಲ್ಲಿ ನಡೆಯಲಿದೆ. ಫೆಬ್ರವರಿ 24 ರಂದು ಬ್ರಿಸ್ಟೇನ್ ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಉಳಿದೆರಡು ಏಕದಿನ ಪಂದ್ಯಗಳು ಫೆಬ್ರವರಿ 27 ಮತ್ತು ಮಾರ್ಚ್ 1 ರಂದು ಹೋಬಾರ್ಟ್‌ನ ಬೆಲ್ಲೆರಿವ್ ಓವಲ್‌ನಲ್ಲಿ ನಡೆಯಲಿವೆ.

ಭಾರತದ ಟಿ20ಐ ತಂಡ: ಹರ್ಮನ್‌ಪ್ರೀತ್ ಕೌರ್ (ನಾ), ಸ್ಮೃತಿ ಮಂಧಾನ(ಉ.ನಾ), ಶಫಾಲಿ ವರ್ಮಾ, ರೇಣುಕಾ ಠಾಕೂರ್, ಶ್ರೀ ಚರಣಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ಸ್ನೇಹ ರಾಣಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿ.ಕೀ), ಜಿ ಕಮಲಿನಿ (ವಿ.ಕೀ), ಅರುಂಧತಿ ರೆಡ್ಡಿ, ಅಮನ್ನೋತ್ ಕೌರ್, ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಾಲಿ, ಶ್ರೇಯಾಂಕ ಪಾಟೀಲ್.

ಭಾರತ ಏಕದಿನ ತಂಡ: ಹರ್ಮನ್‌ಪ್ರೀತ್ ಕೌರ್ (ನಾ), ಸ್ಮೃತಿ ಮಂಧಾನ(ಉ.ನಾ), ಶಫಾಲಿ ವರ್ಮಾ, ರೇಣುಕಾ ಠಾಕೂರ್, ಶ್ರೀ ಚರಣಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ಸ್ನೇಹ ರಾಣಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿ.ಕೀ), ಜಿ ಕಮಲಿನಿ (ವಿ.ಕೀ), ಕಾಶೀ ಗೌತಮ್, ಅಮನ್ಹೋತ್ ಕೌರ್, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್.


Share with

Leave a Reply

Your email address will not be published. Required fields are marked *