ಕಾಂತಾರ: ಚಾಪ್ಟರ್ 1’ ಸಿನಿಮಾ ಇಂದು (ಅಕ್ಟೋಬರ್ 2) ವಿಶ್ವಾದ್ಯಂತ ರಿಲೀಸ್ ಆಗಿದೆ. ಅದಕ್ಕೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 1ರಂದು ಸಿನಿಮಾಗೆ ವಿಶ್ವಾದ್ಯಂತ ಹಲವು ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ಈ ಚಿತ್ರದ ಟಿಕೆಟ್ ಬೆಲೆ ಕೂಡ ಸಖತ್ ದುಬಾರಿ ಆಗಿತ್ತು. ಹೀಗಾಗಿ, ಸಿನಿಮಾಗೆ ಕೋಟಿ ಕೋಟಿ ರೂಪಾಯಿ ಹರಿದು ಬರೋದು ಪಕ್ಕಾ ಆಗಿದೆ. ಇದರಿಂದ ನಿರ್ಮಾಪಕರು ಖುಷಿಯಾಗಿದ್ದಾರೆ.
‘ಕಾಂತಾರ’ ಸಿನಿಮಾದಲ್ಲಿ ದೈವದ ವಿಚಾರಗಳನ್ನು ಇಟ್ಟುಕೊಂಡು ರಿಷಬ್ ಕಥೆ ಹೇಳಿದ್ದರು. ಈಗ ಅವರು ಈ ಚಿತ್ರಕ್ಕೆ ಪ್ರೀಕ್ವೆಲ್ ಮಾಡಿದ್ದಾರೆ. ಈ ಸಿನಿಮಾ ವಿಶ್ವಾದ್ಯಂತ ಮೋಡಿ ಮಾಡುತ್ತಾ ಇದೆ. ಈ ಸಿನಿಮಾಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಿನಿಮಾ ಉದ್ದಕ್ಕೂ ದೈವದ ವಿಚಾರವೇ ಹೈಲೈಟ್ ಆಗಿದೆ. ಜೊತೆಗೆ, ಕೆಲವೊಂದು ಟ್ವಿಸ್ಟ್ಗಳನ್ನು ಕೂಡ ಇಡಲಾಗಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಕೆಲವು ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಹೀಗಾಗಿ, ಸಿನಿಮಾ ಅಪ್ಲೋಡ್ ಆಗಿಯೇ ಇರಲಿಲ್ಲ. ಈ ಕಾರಣದಿಂದಲೇ ಪ್ರೀಮೀಯರ್ ಶೋಗಳನ್ನು ಮಾಡೋದು ಅನುಮಾನ ಎನ್ನಲಾಯಿತು. ಕೊನೆಯ ಕ್ಷಣದಲ್ಲಿ ಚಿತ್ರಕ್ಕೆ ಪ್ರೀಮಿಯರ್ ಶೋಗಳನ್ನು ಹಮ್ಮಿಕೊಳ್ಳಲಾಯಿತು. ಬೆಂಗಳೂರಿನಲ್ಲೇ ಚಿತ್ರಕ್ಕೆ ಸಾಕಷ್ಟು ಶೋಗಳನ್ನು ಆಯೋಜನೆ ಮಾಡಲಾಗಿತ್ತು. ಇದು ಸಿನಿಮಾಗೆ ಸಹಕಾರಿ ಆಗಿದೆ. ಹೀಗಾಗಿ, ಪ್ರೀಮಿಯರ್ ಶೋಗಳಿಂದಲೇ ಚಿತ್ರಕ್ಕೆ ಹಲವು ಕೋಟಿ ರೂಪಾಯಿ ಹರಿದು ಬಂದಿದೆ.





