ಕರಾಟೆ ವಿದ್ಯೆಯು ತಮ್ಮ ಜೀವನದಲ್ಲಿ ಬರುವ ಅಪಾಯಕಾರಿ ಸನ್ನಿವೇಶವನ್ನು ಎದುರಿಸಲು ಧೈರ್ಯವನ್ನು ಕೊಡುವ ಒಂದು ಕಲೆಯಾಗಿದೆ

Share with

ಕಲ್ಲಡ್ಕ :  ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳನ್ನು ಒದಗಿಸಿದಾಗ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಕಾರಣವಾಗುತ್ತದೆ ಜೊತೆಗೆ ಅವರಲ್ಲಿ ಆಸಕ್ತಿದಾಯಕ ಕ್ರಿಯಾತ್ಮಕ ಭಾವನೆಯು ಉಂಟಾಗುತ್ತದೆ. ದೈಹಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ದೈಹಿಕ ಮಾತ್ರವಲ್ಲದೆ ಮಾನಸಿಕ ಸಮತೋಲನವನ್ನು ಉಂಟು ಮಾಡಲು ಸಹಕಾರಿಯಾಗಿದೆ, ಈ ರೀತಿಯಲ್ಲಿ ಕರಾಟೆ ಯಂತಹ ವಿದ್ಯೆಯಿಂದ ತಮ್ಮ ಜೀವನದಲ್ಲಿ ಬರುವ ಅಪಾಯಕಾರಿ ಸನ್ನಿವೇಶವನ್ನು ಎದುರಿಸಲು ಧೈರ್ಯವನ್ನು ಕೊಡುವ ಒಂದು ಕಲೆಯಾಗಿದೆ, ಪ್ರಾಥಮಿಕ ಹಂತದಲ್ಲಿ ಇದನ್ನು ರೂಡಿಸಿಕೊಳ್ಳಬೇಕು ಎಂದು  ದೈಹಿಕ ಶಿಕ್ಷಕರಾದ ಇಂದುಶೇಖರ ಕುಲಾಲ್ ರವರು ಹೇಳಿದರು
ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿವೀರಕಂಭ ಇಲ್ಲಿ ಕರಾಟೆ ತರಗತಿ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
.
ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ ರವರು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು

ಮಜಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿ ಚಿನ್ನಾ ಮೈರ . ಕರಾಟೆ ಶಿಕ್ಷಕಿ ನಿವೇದಿತಾ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಬೆನೆಡಿಕ್ಟ್ ಆಗ್ನೇಸ್ ಮಂಡೋನ್ಸಾ ರವರು ಸ್ವಾಗತಿಸಿ,ಶಿಕ್ಷಕಿ ಸಂಗೀತ ಶರ್ಮ ಪಿ ಜಿ ವಂದಿಸಿದರು.


Share with

Leave a Reply

Your email address will not be published. Required fields are marked *