ಕಾರ್ಕಳ: ಎಳಿಯಾಳ ಪದವು ಬಳಿ ಬೆಂಕಿ ಅವಘಡ

Share with

ಕಾರ್ಕಳ : ರಂಗನಪಲ್ಕೆ ಎಳಿಯಾಳ ಪದವು ಸರಕಾರಿ ಪ್ರಾಥಮಿಕ ಶಾಲಾ ಸಮೀಪ ರಸ್ತೆ ಬದಿಯಲ್ಲಿ ಮಾ.17ರಂದು ಬೆಂಕಿ ಅವಘಡ ನಡೆದಿದೆ.

ಸುತ್ತಲಿನ ಗಿಡಗಂಟಿಗಳು ಸುಟ್ಟು ಹೋಗಿದೆ. ಮಾ.16ರ ರಾತ್ರಿ ಇಲ್ಲಿ ಬೆಂಕಿ ಹತ್ತಿಕೊಂಡಿದ್ದು, ಸ್ಥಳೀಯರೆಲ್ಲಾ ಬೆಂಕಿ ನಂದಿಸಿದ್ದರು. ಆದರೆ ಸೋಮವಾರ ಬೆಳಿಗ್ಗೆ ಮತ್ತೆ ಬೆಂಕಿ ಹತ್ತಿಕೊಂಡಿದ್ದು, ಬದಿಯಲ್ಲಿರುವ ಶಾಲಾ ಕಂಪೌಂಡ್‌ನ ಒಳಗೂ ಬೆಂಕಿ ಆವರಿಸಿಕೊಂಡಿದೆ. ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

.


Share with

Leave a Reply

Your email address will not be published. Required fields are marked *