Karnataka: ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳಲ್ಲಿ ಗಣನೀಯ ಇಳಿಕೆ

Share with

ಬೆಂಗಳೂರು, ಅಕ್ಟೋಬರ್ 05: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಕಳೆದ ವರ್ಷ ಸೆಪ್ಟೆಂಬರ್ ಅಂತ್ಯಕ್ಕೆ ಕರ್ನಾಟಕದಲ್ಲಿ 25,500 ಡೆಂಗ್ಯೂ ಕೇಸ್ಗಳು ವರದಿಯಾಗಿದ್ದವು. ಆದರೆ ಈ ವರ್ಷ ಅದರ ಸಂಖ್ಯೆ 4,281ರ ಆಸುಪಾಸಿನಲ್ಲಿದೆ. ಹಾಗೆಯೇ ಕಳೆದ ವರ್ಷ 7,950 ಚಿಕುನ್ ಗುನ್ಯಾ ಕೇಸ್ಗಳು ಪತ್ತೆಯಾಗಿದ್ರೆ ಈ ಬಾರಿ ಅದರ ಸಂಖ್ಯೆ ಕೇವಲ 861. ಆ ಮೂಲಕ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರ ಒಗ್ಗಟ್ಟಿನ ಪ್ರಯತ್ನ ಫಲ ಕೊಟ್ಟಿದೆ.

ಡೆಂಗ್ಯೂ ಮತ್ತು ಚಿಕುನ್ ಗುನ್ಯಾ  ಹೆಣ್ಣು ಏಡಿಸ್ ಸೊಳ್ಳೆಗಳ ಕಚ್ಚುವಿಕೆಯೆ ಬರುವಂತಹ ಖಾಯಿಲೆಗಳಾಗಿದ್ದು, ಕಳೆದ ವರ್ಷ ಇವು ರಾಜ್ಯದಲ್ಲಿ ತಾಂಡವವಾಡಿದ್ದವು. ಅದರಲ್ಲಿಯೂ 2024ರಲ್ಲಿ ಒಟ್ಟಾರೆಯಾಗಿ 32,800 ಡೆಂಗ್ಯೂ ಕೇಸ್ಗಳು ವರದಿಯಾಗಿ, 27 ಜನ ಇದರಿಂದ ಪ್ರಾಣ ಕಳೆದುಕೊಂಡಿದ್ದರು. ಆದರೆ ಈ ವರ್ಷ ಇಲ್ಲಿಯವರೆಗೂ ಯಾವುದೇ ಸಾವು ನೋವುಗಳು ದಾಖಲಾಗಿಲ್ಲ. ನೆರೆ ರಾಜ್ಯ ಮಹಾರಾಷ್ಟ್ರದ ಬಳಿಕ ಕರ್ನಾಟಕವೇ ಚಿಕುನ್ ಗುನ್ಯಾದ 2ನೇ ಹಾಟ್ಸ್ಪಾಟ್ ಆಗಿ ಗುರುತಿಸಿಕೊಂಡಿತ್ತು.


Share with

Leave a Reply

Your email address will not be published. Required fields are marked *