Kasaragod: ಬಂಧನದಲ್ಲಿದ್ದ ಪೋಕ್ಸೋ ಪ್ರಕರಣದ ಆರೋಪಿ ಸಾವು

Share with

ಕಾಸರಗೋಡು: ಬಂಧನದಲ್ಲಿದ್ದ ಪೋಕೋ ಪ್ರಕರಣದ ಆರೋಪಿ ದೇಳಿ ಕುನ್ನುಪ್ಪಾರದ ಮುಬಶೀರ್ (29) ಕಾಸರಗೋಡು ಸಬ್‌ಜೈಲ್‌ನಲ್ಲಿ ಮೃತಪಟ್ಟಿದ್ದಾನೆ.

ಅಸ್ವಸ್ಥನಾಗಿದ್ದ ಆತನನ್ನು ಬುಧವಾರ (ನ.26) ಮುಂಜಾನೆ 5.30ಕ್ಕೆ ಜೈಲು ಅಧಿಕಾರಿಗಳು ಜನರಲ್ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರೊಳಗೆ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮೃತದೇಹವನ್ನು ಶವಾಗಾರದಲ್ಲಿರಿಸಲಾಗಿದೆ.

ಕೊಲ್ಲಿಯಲ್ಲಿದ್ದ ಮುಬಶೀರ್ ಎರಡು ತಿಂಗಳ ಹಿಂದೆ ಊರಿಗೆ ಬಂದಿದ್ದ. ಮೂರು ವಾರಗಳ ಹಿಂದೆ ಪೋಕೋ ಪ್ರಕರಣದಲ್ಲಿ ವಾರಂಟ್ ಇರುವುದಾಗಿ ತಿಳಿಸಿ ಪೊಲೀಸರು ಬಂಧಿಸಿದ್ದರು. ಸಾವಿನಲ್ಲಿ ಸಂಶಯವಿರುವುದಾಗಿಯೂ ಕುಟುಂಬ ಆರೋಪಿಸಿದೆ. ಮುಬಶೀರ್ ಸಾವಿಗೆ ಸಂಬಂಧಿಸಿ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *