ಕಾಸರಗೋಡು: ಕರಂದಕ್ಕಾಡು, ಶಿವಾಜಿನಗರ, ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಇದರ ವತಿಯಿಂದ ಶ್ರೀ ವಿಶ್ವ ಕರ್ಮ ಭಜನಾ ಸಂಘದ 67ನೇ ಭಜನಾ ವಾರ್ಷಿಕೋತ್ಸವ ಫೆ.3ರಂದು ಗಣಹೋಮದೊಂದಿಗೆ ಪ್ರಾರಂಭವಾಯಿತು.
ಸಂಘದ ಅಧ್ಯಕ್ಷರಾದ ಭುವನೇಶ ಆಚಾರ್ಯ ತಾಳಿಪಡ್ಪು ಇವರು ಧ್ವಜಾರೋಹಣ ಗೈದರು ಸಂಜೆ ತಂತ್ರಿ ಯವರಾದ ಮಾಯಿಪ್ಪಾಡಿ ಬ್ರಹ್ಮಶ್ರೀ ಮಾಧವ ಆಚಾರ್ಯ ಇವರ ಮಾರ್ಗದರ್ಶನದಲ್ಲಿ ಮಾಯಿಪ್ಪಾಡಿ ಕೇಶವ ಆಚಾರ್ಯ ಅವರ ಉಪಸ್ಥಿತಿಯಲ್ಲಿ ಪುರೋಹಿತ ಪರಕ್ಕಿಲ ಧರ್ಮೇಂದ್ರ ಆಚಾರ್ಯ ಇವರ ದಿವ್ಯ ಹಸ್ತದಿಂದ ದೀಪ ಪ್ರಜ್ವಲನೆಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ, ಶ್ರೀ ವಿಶ್ವಕರ್ಮ ಯುವಕ ಸಂಘ ಹಾಗೂ ಶ್ರೀ ವಿಶ್ವ ಕರ್ಮ ಮಹಿಳಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸಂಘ ಕಾರ್ಯಕರ್ತರು ಭಜನೆ ಸಂಕೀರ್ತನೆ ಗೆ ಚಾಲನೆ ನೀಡಿದರು. ಬಳಿಕ ವಿವಿಧ ಭಜನಾ ತಂಡಗಳು ಭಜನೆ ನಡೆಸಿಕೊಟ್ಟರು. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಹೊರಟ ಹುಲ್ಪೆ ಮೆರವಣಿಗೆಯು, ಮಕ್ಕಳು ದೀಪ ಹಿಡಿದು ಭಜನೆ ಹಾಡುತ್ತಾ ಜೊತೆಗೆ ಕಾರ್ಯಕರ್ತರು ಚಂಡೆ ನಾಸಿಕ್ ಬ್ಯಾಂಡ್ ಮಹಿಳೆಯರು ಹಾಗೂ ಮಹನೀಯರು ಸಮವಸ್ತ್ರ ಧರಿಸಿ ಅಲಂಕಾರ ಕೊಡೆ ಹಿಡಿದು ಫಲಪುಷ್ಪಗಳೊಂದಿಗೆ ಶ್ರೀ ಮಂದಿರಕ್ಕೆ ಆಗಮಿಸಲಾಯಿತು. ಇದು ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಎಲ್ಲರಿಗೂ ಉಪಹಾರ ವ್ಯವಸ್ಥೆ ಮಾಡಲಾಯಿತು. ಭಕ್ತಾದಿಗಳು ಹಲವು ರೀತಿಯಲ್ಲಿ ಸಹಾಯ ಸಹಕಾರ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಬಹಳ ವಿಜೃಂಬಣೆಯಿಂದ ಧಾರ್ಮಿಕ ಕಾರ್ಯಕ್ರಮ ಜರಗಿತು.