
ಕಾಸರಗೋಡು: ಕೇರಳ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 430 ಕ್ಕೇರಿದೆ. ಸೋಮವಾರವರೆಗಿನ ಲೆಕ್ಕಾಚಾರ ದಂತೆ 335 ಮಂದಿ ಕೋವಿಡ್ ಬಾಧಿತ ರಿದ್ದರು. ಅದಾದ ಒಂದು ವಾರದಲ್ಲಿ ಆಸಂಖ್ಯೆ 430 ಕ್ಕೇರಿದೆ. ಕೊಟ್ಟಾಯಂ, ತಿರುವನಂತಪುರ, ಎರ್ನಾಕುಲಂ, ಪತ್ತನಂತಿಟ್ಟ ಮತ್ತು ತ್ರಿಶೂರು ಜಿಲ್ಲೆಗಳಲ್ಲಿ ಅತೀ ಹೆಚ್ಚು ಸೋಂಕು ವರದಿಯಾಗಿದೆ.
ಕೊಲ್ಲಂ ಮತ್ತು ತಿರುವನಂತಪುರ ಜಿಲ್ಲೆಗಳಲ್ಲಿ ಕಳೆದ ವಾರ ಇಬ್ಬರು ಸಾವಿಗೀಡಾ ಗಿದ್ದರು. ಕೋವಿಡ್ ಸೋಂಕಿತರ ಸಂಖ್ಯೆ ಹಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶೀತ, ನೆಗಡಿ, ಗಂಟಲು ನೋವು, ಉಸಿರಾಟ ತೊಂದರೆ ಇತ್ಯಾದಿ ರೋಗ ಲಕ್ಷಣ ವಿರುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ ರಿಸಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ. ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು ಇತರ ಗಂಭೀರ ಕಾಯಿಲೆ ಯಿಂದ ಬಳಲುತ್ತಿರುವವರು ಪ್ರಯಾಣದ ವೇಳೆ ಮಾಸ್ಕ್ ಧರಿಸಬೇಕು. ಆರೋಗ್ಯ ಕಾರ್ಯಕರ್ತ ರೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.





