ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘಕ್ಕೆ ‘ಸಹಕಾರಿ ರತ್ನ ಪುರಸ್ಕಾರ’

Share with

ಕಾಸರಗೋಡು: ತೃಶೂರು ಕೇಂದ್ರವಾಗಿ ಕಾರ್ಯಾಚರಿಸುವ ಟೀಮ್ ಕೋ-ಆಪರೇಟಿವ್‌ನ ಸಹಕಾರಿ ರತ್ನ ಪುರಸ್ಕಾರ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘಕ್ಕೆ ಲಭಿಸಿದೆ.

ಸಂಘದ ಸ್ತುತ್ಯರ್ಹವಾದ ಚಟುವಟಿಕೆ, ನೂತನ ಸಹಕಾರಿ ಮಾದರಿಗಳು ಎಂಬಿವುಗಳನ್ನು ಪರಿಗಣಿಸಿ ಪುರಸ್ಕಾರ ಲಭಿಸಿದೆ. ಕಲ್ಲಿಕೋಟೆ ನಳಂದ ಸಭಾಂಗಣದಲ್ಲಿ ನಡೆದ ಸಹಕಾರಿ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಂಘದ ಕಾರ್ಯದರ್ಶಿ ಪ್ರದೀಪ್ ಕೆ. ಪುರಸ್ಕಾರ ಸ್ವೀಕರಿಸಿದರು. ಅಗ್ರಿಕಲ್ಟರ್ ಕೋ-ಓಪರೇಟಿವ್ ಸ್ಟಾಫ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನ ಮಾಜಿ ನಿರ್ದೇಶಕ ಬಿ.ಪಿ. ಪಿಳ್ಳ ಐ.ಸಿ.ಎಂ. ಮಾಜಿ ನಿರ್ದೇಶಕ ಎಂ.ವಿ. ಶಶಿಕುಮಾರ್, ಕನ್ಸೂಮರ್ ಹೆಡ್ ರಾಮನುಣ್ಣಿ ದಿನೇಶ್‌ ಚೆಯರ್‌ಮೆನ್ ದಿನೇಶ್ ಬಾಬು, ಕಲ್ಲಿಕೋಟೆ ಸರ್ಕಲ್ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರೇಮ್ ಕುಮಾ‌ರ್, ಟೀಮ್ ಕೋ-ಓಪರೇಟಿವ್‌ ನಿರ್ದೇಶಕ ಮಧು ಉಪಸ್ಥಿತರಿದ್ದರು. ಕಲ್ಲಿಕೋಟೆ ಮೇಯರ್ ಒ. ಸದಾಶಿವನ್ ಉದ್ಘಾಟಿಸಿದರು. ಟೀಮ್ ಕೋ-ಓಪರೇಟಿವ್‌ನ ನೇತೃತ್ವದಲ್ಲಿ ಪ್ರಥಮವಾಗಿ ಸಹಕಾರಿ ಸಂಸ್ಥೆಗಳನ್ನು ಪಾಲ್ಗೊಳ್ಳಿಸಿ ರಿಯಾಲಿಟಿ ಶೋ ಆಯೋಜಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದಿರುವ ಸಹಕಾರಿ ಸಂಸ್ಥೆಗಳು ತಮ್ಮ ಮಾದರಿ ಚಟುವಟಿಕೆ, ಸಹಕಾರಿ ವಿಜಯಗಾಥೆ, ಸಹಕಾರಿ ಮಾದರಿ, ಹೊಸ ಸಹಕಾರಿ ಪಾಠ ಎಂಬಿವುಗಳನ್ನು ಮಂಡಿಸಿತು.


Share with

Leave a Reply

Your email address will not be published. Required fields are marked *