ಕಾಸರಗೋಡು ದಸರಾ ಸಾಧಕ ಸನ್ಮಾನ’ ಪ್ರದಾನ

Share with

ಕುಂಬಳೆ: ಧಕ್ಷಿಣ ಕನ್ನಡ ಸಾಹಿತ್ಯ ಪರಿಷತ್ ನಿಕಟಪರ‍್ವ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಸಾಹಿತಿಗಳಾದ ರಾಧಾಕೃಷ್ಣ ಉಳಿಯತ್ತಡ್ಕ, ರವಿ ನಾಯ್ಕಪು, ತ್ಯಾಗರಾಜ್ ಮೈಸೂರು, ವೆಂಕಟ ಭಟ್ ಎಡನೀರು, ಜಯಂತ್ ಪೆರಾಜೆ, ಶಾಂತಾ ಪುತ್ತೂರು, , ಡಾ.ಶೈಲಾ ಪ್ರಕಾಶ್ ಕೆ.ಎನ್, ಡಾ. ಅನುರಾಧಾ ಕುರುಂಚಿ ಸುಳ್ಯ, ಉದಿನೂರು ಮುಹಮ್ಮದ್ ಕುಂಞಿ, ಪ್ರೊ.ಶ್ರೀನಾಥ್, ಪತ್ರರ‍್ತರಾದ ಪ್ರದೀಪ್ ಬೇಕಲ್, ವಿ. ಜೀ. ಕಾಸರಗೋಡು, ವರ‍್ಡ್ ಸದಸ್ಯ ಮೊಯಿದು ಕಂಪ್ಯೂಟರ್ ಸೇರಿದಂತೆ ಹಲವಾರು ಗಣ್ಯರಿಗೆ ‘ಕಾಸರಗೋಡು ‘ದಸ್ಸರ ಸಾಧಕ ಸನ್ಮಾನ’ ಪ್ರದಾನ ಮಾಡಲಾಯಿತು.

ಕಾಸರಗೋಡಿನ ಕನ್ನಡ ಸಂಸ್ಕೃತಿಯನ್ನು ಉತ್ತೇಜನ ಗೊಳಿಸಲು ೧೦ ದಿನಗಳ ಕಾಲ ನುಳ್ಳಿಪಾಡಿಯಲ್ಲಿರುವ ಕನ್ನಡ ಭವನದ ವಾಮನ್ ರಾವ್ ಬೇಕಲ್ ಅವರ ನೇತೃತ್ವದಲ್ಲಿ ಆಯೋಜಿಸಲ್ಪಟ್ಟ ‘ಕಾಸರಗೋಡು ದಸ್ಸರ ಸಾಂಸ್ಕೃತಿಕೋತ್ಸವ -೨೦೨೩’ ಇದರ ಪ್ರಯುಕ್ತವಾಗಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ’ ಪ್ರದಾನ ಮಾಡಲಾಯಿತು.ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ೩೭ ಯುವ ಪ್ರತಿಭಾನ್ವಿತರಿಗೆ ಯುವ ಪ್ರತಿಭಾ ಪ್ರಶಸ್ತಿ ‘ಭರವಸೆಯ ಬೆಳಕು’ ೨೦೨೩ ನೀಡಿ ಗೌರವಿಸಿ ಮಕ್ಕಳನ್ನು ಪ್ರೋತ್ಸಾಹಿಸುವ ಮಹತ್ವವನ್ನು ಉಲ್ಲೇಖಿಸಿ ಅವರಿಗೆ ಶುಭ ಹಾರೈಸಿದರು

ದ.ಕ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರು ಜಾತಿ ಮತ ಭೇಧಗಳನ್ನು ಮರೆತು ಎಲ್ಲರೂ ಸಹಕರಿಸಿ ಬಾಳುವ ಸಮಾಜ ನರ‍್ಮಾಣಕ್ಕೆ ಪ್ರತಿ ಒಬ್ಬರೂ ಶ್ರಮಿಸ ಬೇಕು ಎಂದು ಪ್ರಸ್ತಾಪಿಸಿದರು. ಪ್ಯಾನಸೋನಿಕ್ ಕಂಪನಿಯ ಸ್ಥಾಪಕರಾಗಿದ್ದ ಕೊನೊಸುಕೆ ಮತ್ಸುಶಿತಾ ತನ್ನ ಜೀವನದಲ್ಲಿ ಯಶಸ್ಸು ಪಡೆಯುವ ಮುನ್ನ ಎದುರಿಸಿದ ಅನೇಕ ವ್ಯಫಲ್ಯಗಳನ್ನು ವಿವರಿಸಿ ಸೋಲಲ್ಲೂ ಭರವಸೆ ಕಳೆದುಕೊಳ್ಳದೆ ಲಕ್ಷ್ಯ ಪ್ರಾಪ್ತಿಗಾಗಿ ಯತ್ನಿಸ ಬೇಕು ಎಂದು ಪ್ರಾಧ್ಯಾಪಕರಾದ ಡಾ. ಶೈಲಾ ಕೆ.ಎನ್ ಅವರ ಅವರು ಮಕ್ಕಳಿಗೆ ಸ್ಪರ‍್ತಿ ನೀಡಿದರು, ಮಾನವೀಯ ದ್ರಿಷ್ಟಿಯಿಂದ ಸರಿ ಸಮಾನರಾಗಿ ಎಲ್ಲ ರ‍್ಮದವರನ್ನೂ ದ್ವೇಷಿಸದೆ ಅವರನ್ನೂ ಅವರ ಸಂಸ್ಕೃತಿಯನ್ನೂ ಗೌರವಿಸಿ ಜೀವನವನ್ನು ಸರ‍್ಥಕ ಗೊಳಿಸಲು ಎಲ್ಲರೂ ಮುಂದೆ ಬರ ಬೇಕು, ಹಾಗೆ ಕುವೆಂಪು ಅವರ ರ‍್ವ ಜನಾಂಗದ ಶಾಂತಿಯ ತೋಟವಾಗಿ ನಮ್ಮ ರಾಜ್ಯ ಪರಿರ‍್ತನೆ ಗೊಳ್ಳಬೇಕು ಎಂಬ ಉಪನ್ಯಾಸಕರೂ ವ್ಯಕ್ತಿತ್ವಾ ವಿಕಸನ ತರಭೇತುಧಾರರೂ ಆದ ಡಾ. ಅನುರಾಧ ಕುರುಂಜಿ ಸುಳ್ಯ ಅವರು ನುಡಿದರು.

ಕಾಸರಗೋಡು ಕನ್ನಡ ಭವನದ ಸ್ಥಾಪಕ ವಾಮನ ರಾವ್ ಬೇಕಲ್ ಮತ್ತು ಅವರ ಪತ್ನಿ ಸಂಧ್ಯಾರಾಣಿ ಟೀಚರ್ ಅವರು ಗಡಿನಾಡಿನ ಕನ್ನಡ ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಭಾಷಣಕಾರರು ಶ್ಲಾಘಿಸಿದರು. ವಾಮನ ರಾವ್ ಬೇಕಲ್ ಸ್ವಾಗತಿಸಿ, ವಸಂತ ಕೆರೆಮನೆ ವಂದಿಸಿದರು. ಕಾಸರಗೋಡು ಕನ್ನಡ ಪತ್ರರ‍್ತರ ಸಂಘದ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆಯವರು ದಸರಾ ಉತ್ಸವ ಸಮಿತಿಯ ಸಹ ಸಂಚಾಲಕರಾಗಿದ್ದಾರೆ.


Share with

Leave a Reply

Your email address will not be published. Required fields are marked *