ಕಾಸರಗೋಡು: ದಲಿತ ಮನೆಗಳಿಗೆ ಎಡನೀರು ಶ್ರೀ ಭೇಟಿ

Share with

ಕಾಸರಗೋಡು: ಶ್ರೀಮದ್‌ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಪರಮ ಪೂಜ್ಯ ಶಂಕರಾಚಾರ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ರವಿವಾರ ಎಣ್ಮಕಜೆ ಪಂಚಾಯತ್‌ನ ವಾಣೀನಗರ ಕುತ್ತಾಜೆಯ ದಲಿತ ಕಾಲನಿಯ 28 ಮನೆಗಳನ್ನು ಪಾದಯಾತ್ರೆ ಮೂಲಕ ಸಂದರ್ಶಿಸಿ ಮನೆಮಂದಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.

ಎಡನೀರು ಶ್ರೀಗಳು ಬಡ ದೀನ, ದಲಿತರ ಮನೆಗೆ ಪಾದಯಾತ್ರೆ ಮಾಡಿ ಹಿಂದೂ ಸಾಮರಸ್ಯತೆಯ ಏಕತೆಗಾಗಿ ಎಲ್ಲರೂ ನಮ್ಮವರೆಂದು ಬೆರೆಯುವುದು ಇಂದಿನ ಕಾಲಘಟ್ಟದ ಅನಿವಾರ್ಯ.
ಈ ಮೂಲಕ ಸನಾತನ ಧರ್ಮ ಛಿದ್ರವಾಗದೆ ಕಾಪಾಡಲು ಸಾಧ್ಯ ಎಂದು ಆಶೀರ್ವಚನದಲ್ಲಿ ತಿಳಿಸಿದರು.


Share with

Leave a Reply

Your email address will not be published. Required fields are marked *