ಬೋವಿಕಾನ: ಪತ್ನಿಗೆ ಇರಿದು ಗಂಭೀರ ಗಾಯಗೊಳಿಸಿ ಪತಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ.

ಕುತ್ತಿಕೋಲು ಪಯವ೦ಗಾನಂ ನಿವಾಸಿ, ಆಟೋ ಚಾಲಕ ಸುರೇಶ್(51) ಆತ್ಮಹತ್ಯೆಗೈದ ವ್ಯಕ್ತಿಯಾಗಿದ್ದಾರೆ. ಇವರ ಪತ್ನಿ ಸಿನಿ(41) ಗಂಭೀರ ಗಾಯಗಳೊಂದಿಗೆ ಚೆಂಗಳ ಇ.ಕೆ.ನಾಯನಾರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇಂದು (ಶುಕ್ರವಾರ) ಬೆಳಗ್ಗೆ 8.15 ಕ್ಕೆ ಈ ಘಟನೆ ನಡೆದಿದೆ. ಈ ದಂಪತಿಗೆ 5 ಹಾಗೂ 1 ವರ್ಷದ ಇಬ್ಬರು ಮಕ್ಕಳಿದ್ದಾರೆ. ಮಕ್ಕಳು ಮಲಗಿರುವ ಕೋಣೆಯ ಬಾಗಿಲು ಹಾಕಿ, ಅಡುಗೆ ಕೋಣೆಯಲ್ಲಿದ್ದ ಪತ್ನಿಗೆ ಇರಿಯಲಾಗಿದೆ. ಕತ್ತಿಗೆ ಗಂಭೀರ ಗಾಯಗೊಂಡ ಸಿನಿ ನೆರೆ ಮನೆಗೆ ಓಡಿದ್ದು, ಸ್ಥಳೀಯರು ಸೇರಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು.
ಈ ಮಧ್ಯೆ ಸ್ಥಳೀಯರಾದ ಕೆಲವರು ಮನೆಗೆ ಬಂದು ನೋಡಿದಾಗ ಸುರೇಶರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿದು ಬೇಡಗಂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ




