
ಕಾಸರಗೋಡು: ರಸ್ತೆ ದಾಟುತ್ತಿದ್ದಾಗ ಕಾರುಗಳು ಢಿಕ್ಕಿ ಹೊಡೆದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬದಿಯಡ್ಕ -ಕುಂಬಳೆ ಕೆಎಸ್‌ಟಿಪಿ ರಸ್ತೆಯಲ್ಲಿ ನೀರ್ಚಾಲು ವಿಷ್ಣುಮೂರ್ತಿ ನಗರದಲ್ಲಿ ನಡೆದಿದೆ. ಮಾನ್ಯ ಉಳ್ಳೋಡಿಯ ಗೋಪಾಲ (60) ಮೃತಪಟ್ಟರು.
ಕಾರು ಢಿಕ್ಕಿ ಹೊಡೆದಾಗ ರಸ್ತೆಗೆ ಬಿದ್ದ ಅವರ ಮೈಮೇಲೆ ಇನ್ನೊಂದು ಕಾರು ಹರಿದು ಗಂಭೀರ ಗಾಯಗೊಂಡಿದ್ದರು. ಅವರನ್ನು ತತ್‌ಕ್ಷಣ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಈ ಘಟನೆಗೆ ಸಂಬಂಧಿಸಿ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.