
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಕೇರಳಕ್ಕೆ 23,300 ಕೋಟಿ ರೂ. ಮಂಜೂರು ಮಾಡಿದ್ದು, ಇದರಲ್ಲಿ ರಾಜ್ಯ ಸರಕಾರ ಕೇವಲ 7300 ಕೋಟಿ ರೂ. ಖರ್ಚು ಮಾಡಿದೆ.
2024-25 ನೇ ಸಾಲಿನಲ್ಲಿ ಕೇಂದ್ರ ಭೂ ಸಾರಿಗೆ ಇಲಾಖೆ ಕೇರಳಕ್ಕೆ ಇಷ್ಟೊಂದು ಮೊತ್ತ ನೀಡಿದ್ದು, ಅದರಲ್ಲಿ ಶೇ.31 ರಷ್ಟು ಮಾತ್ರವೇ ಕೇರಳ ಸರಕಾರ ಖರ್ಚು ಮಾಡಿದೆ.
ಇತರ ರಾಜ್ಯಗಳಿಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಭೂ ಸಾರಿಗೆ ಇಲಾಖೆ ಹಣ ಮಂಜೂರು ಮಾಡಿದೆ. ಇದರಂತೆ ಆಂಧ್ರ ಪ್ರದೇಶಕ್ಕೆ 10,000 ಕೋಟಿ ರೂ., ತೆಲಂಗಾಣಕ್ಕೆ 7000 ಕೋಟಿ ರೂ., ತಮಿಳುನಾಡಿಗೆ 15,000 ಕೋಟಿ ರೂ., ಕರ್ನಾಟಕಕ್ಕೆ 15000 ಕೋಟಿ ರೂ. ಮಂಜೂರು ಮಾಡಿದೆ. ಈ ಪೈಕಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಹಣವನ್ನು ಪೂರ್ಣವಾಗಿ ವೆಚ್ಚ ಮಾಡಿದ್ದರೆ, ಕರ್ನಾಟಕ ಶೇ.70 ಮತ್ತು ತಮಿಳುನಾಡು ಶೇ.75 ರಷ್ಟು ಖರ್ಚು ಮಾಡಿದೆ. ಆದರೆ ಕೇರಳ ಅತೀ ಕಡಿಮೆ ಎಂಬಂತೆ ಶೇ.31 ರಷ್ಟು ಮೊತ್ತವನ್ನು ವಿನಿಯೋಗಿಸಿದೆ. ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಇನ್ನೂ ಮಂದಗತಿಯಲ್ಲಿ ಸಾಗಿದೆ. ತಲಪಾಡಿ-ಚೆಂಗಳ, ಕಲ್ಲಿಕೋಟೆ ಬೈಪಾಸ್, ರಾಮನಾಟ್ಟುಂಗರ-ವಳಾಂಚೇರಿ ಮೊದಲಾದೆಡೆ ಹೆದ್ದಾರಿ ಅಭಿವೃದ್ಧಿ ಪ್ರಗತಿಯಲ್ಲಿದೆ