
ಕಾಸರಗೋಡು: ತಲಪ್ಪಾಡಿಯಿಂದ ಚೆಂಗಳ ತನಕ ದ 39 ಕಿ. ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯ ಮೊದಲ ಹಂತದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಲೋಕೋಪಯೋಗಿ ಸಚಿವ ಪಿ.ಎ ಮುಹಮ್ಮದ್ ರಿಯಾಝ್ ಮಂಗಳವಾರ ಸಂಜೆ ಭೇಟಿ ನೀಡಿ ಅವಲೋಕನ ನಡೆಸಿದರು.

ಮೊದಲ ಹಂತದಲ್ಲಿ 27 ಮೀಟರ್ ಉದ್ದದ ದಕ್ಷಿಣ ಭಾರತದಲ್ಲೇ ಪ್ರಥಮ ಬಾಕ್ಸ್ ಗರ್ಡರ್ ಮಾದರಿಯಲ್ಲಿ ನಿರ್ಮಿಸಿರುವ ಮೇಲ್ಸೇತುವೆ ಮೂಲಕ ಸಂಚರಿಸಿ ಪರಿಶೀಲನೆ ನಡೆಸಿದರು.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಸರಗೋಡಿನ ಅಭಿವೃದ್ದಿಗೆ ಮೈಲುಗಲ್ಲು ಆಗಲಿದೆ ಎಂದು ಸಚಿವರು ಹೇಳಿದರು.




