ಕಾಸರಗೋಡು ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪಿ. ಬಿಜೋಯ್; ಡಾ.ವೈಭವ್ ಸತ್ತೇನಾ ಎರ್ನಾಕುಲಂಗೆ ವರ್ಗಾವಣೆ

Share with

ಕಾಸರಗೋಡು: ಇಲ್ಲಿನ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪಿ. ಬಿಜೋಯ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ.ವೈಭವ್ ಸತ್ತೇನಾ ಅವರನ್ನು ಎರ್ನಾಕುಲಂಗೆ ವರ್ಗಾಹಿಸಲಾಗಿದೆ.

ಬಿಜೋಯ್ 1996ರಲ್ಲಿ ಮಂಜೇಶ್ವರ ಠಾಣಾ ಸಬ್ ಇನ್ಸ್ ಪೆಕ್ಟರ್ ಆಗಿ, 2010ರಲ್ಲಿ ಕಾಸರಗೋಡು ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ತಿರುವನಂಪುರ ನಗರ ಪೊಲೀಸ್ ಸಹಾಯಕ ಆಯುಕ್ತ, ಎರ್ನಾಕುಲಂ ವಿಟಿಲಿನ್ಸ್ ಮುಖ್ಯಸ್ಥ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ್ದಾರೆ.

2015ರಲ್ಲಿ ಮುಖ್ಯ ಮಂತ್ರಿಯವರ ಪೊಲೀಸ್ ಪದಕ 2018ರಲ್ಲಿ ರಾಷ್ಟ್ರ ಪತಿ ಯವರ ಪೊಲೀಸ್ ಪದಕ ಪಡೆದಿದ್ದರು. ತಿರುವನಂತಪುರ ಸ್ಪೆಷಲ್ ಬ್ರಾಂಚ್ ಪೊಲೀಸ್‌ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ನಿಯುಕ್ತಿಗೊಳಿಸಲಾಗಿದೆ.


Share with

Leave a Reply

Your email address will not be published. Required fields are marked *