ಕಾಸರಗೋಡು: ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಪ್ತತಿ ಮಹೋತ್ಸವದ ಅಂಗವಾಗಿ ಪಾದಯಾತ್ರೆ

Share with

ಕಾಸರಗೋಡು: ಮಲ್ಲಿಕಾರ್ಜುನ ದೇವಸ್ಥಾನದ ವಠಾರದಲ್ಲಿ ಆ . 27ರಿಂದ ಸೆ .6 ರವರಿಗೆ ಸಾರ್ವಜನಿಕ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಪ್ತತಿ ಮಹೋತ್ಸವದ ಅಂಗವಾಗಿ, ಹಿಂದೂ ಭಕ್ತರ ಸರ್ವತೋಮುಖ ಯಶಸ್ಸಿಗಾಗಿ ವಿಶೇಷ ಪಾದಯಾತ್ರೆ ಆಯೋಜಿಸಲಾಗಿದೆ.

ಈ ಪ್ರಯುಕ್ತ ಆ.3ರಂದು ಬೆಳಿಗ್ಗೆ 5 ಗಂಟೆಗೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಧ್ವಜಾರೋಹಣಗೊಂಡು ಅಡೂರು ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದು ಸಂಜೆ 5 ಗಂಟೆಗೆ ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ತಲುಪಲಿದೆ. ಭಜನೆ ಮತ್ತು ಸ್ತೋತ್ರಪಠಣದೊಂದಿಗೆ ಈ ಧಾರ್ಮಿಕ ಪಾದಯಾತ್ರೆ ನಡೆದಿದ್ದು, ನೂರಾರು ಭಕ್ತಾಧಿಗಳು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಅಡೂರು ದೇವಸ್ಥಾನದಲ್ಲಿ ವಿಶೇಷ ಪೂಜೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.

ಆ.10 ರಂದು ಮಧೂರು,ಮುಜುಂಗಾವು, ಕಣಿಪುರಕ್ಕೆ ಪಾದಯಾತ್ರೆ

ಈ ಯಾತ್ರೆಯಲ್ಲಿ ಕುಂಬಳೆ ಸೀಮೆಯ ನಾಲ್ಕು ಪ್ರಮುಖ ದೇವಾಲಯಗಳು — ಅಡೂರು, ಮಧೂರು, ಮುಜಂಗಾವು ಹಾಗೂ ಕಣಿಪುರ — ಸೇರಿಸಲ್ಪಟ್ಟಿದ್ದು, ಆ.10 ರಂದು ಮಧೂರು, ಮುಜಂಗಾವು ಹಾಗೂ ಕಣಿಪುರ ದೇವಸ್ಥಾನಕ್ಕೆ ಮಲ್ಲಿಕಾರ್ಜುನ ದೇವಾಲಯದಿಂದ ಭಜನೆ ಮತ್ತು ಸ್ತೋತ್ರಪಠಣದೊಂದಿಗೆ ಧಾರ್ಮಿಕ ಪಾದಯಾತ್ರೆ ನಡೆಯಲಿದೆ. ಬೆಳಿಗ್ಗೆ 5 ಗಂಟೆಗೆ ಮಲ್ಲಿಕಾರ್ಜುನ ದೇವಸ್ಥಾನದಿಂದ ಪಾದಯಾತ್ರೆ ಪುನಾರಂಭವಾಗಲಿದ್ದು, ಮಧೂರು ಮತ್ತು ಮುಜಂಗಾವು ಮಾರ್ಗವಾಗಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಯಶಸ್ವಿಯಾಗಿ ಸಮಾಪ್ತಿಗೊಳ್ಳಲಿದೆ.

ಭಕ್ತಾದಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯಪೂರ್ಣ ಯಾತ್ರೆಯಲ್ಲಿ ಪಾಲ್ಗೊಂಡು, ಧಾರ್ಮಿಕ ಶ್ರದ್ಧೆ ಹಾಗೂ ಸಮೂಹ ಸೌಹಾರ್ದತೆಗೆ ನೆರವಾಗುವಂತೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.


Share with

Leave a Reply

Your email address will not be published. Required fields are marked *