ಆಫ್ರಿಕಾದಲ್ಲಿ ಕಾಸರಗೋಡು ನಿವಾಸಿ ಅಪಹರಣ

Share with

ಪ್ರಿಟೋರಿ: ಆಫ್ರಿಕಾದಲ್ಲಿ ಕಾಸರಗೋಡು ನಿವಾಸಿ ಸೇರಿದಂತೆ ಹತ್ತು ಮಂದಿ ಸಿಬ್ಬಂದಿಯನ್ನು ಅಪಹರಿಸಿರುವುದಾಗಿ ಮಾಹಿತಿ ಲಭಿಸಿದೆ. ಕಾಸರಗೋಡು ಕೋಟಿಕುಳಂ ಗೋಪಾಲ್ ಪೇಟೆಯ ರಾಜೇಂದ್ರನ್ ಭಾರ್ಗವನ್ (35) ಸೇರಿದಂತೆ ಹತ್ತು ಮಂದಿಯನ್ನು ಅಪಹರಿಸಲಾಗಿದೆ.

ಆಫ್ರಿಕಾ ದಿಂದ ಲೋಮೋ ಬಂದರಿನಿಂದ ಕ್ಯಾಮರೋನ್ ಗೆ ತೆರಳುತ್ತಿದ್ದ ಸರಕು ಹಡಗನ್ನು ಕಡಲು ಕಳ್ಳರು ಅಪಹರಿಸಿ ಸಿಬಂದಿಗಳನ್ನು ಬಂಧಿಸಿದ್ದಾರೆ. ವಿಟೂ ರಿವರ್ ಕಂಪೆನಿ ಅಧಿಕಾರಿಗಳು ಅಪಹರಣದ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾರೆ.


Share with

Leave a Reply

Your email address will not be published. Required fields are marked *