
ಕಾಸರಗೋಡು: ಗುಣಮಟ್ಟವಿಲ್ಲದ ಗ್ರೀನ್ ಚಿಲ್ಲಿ ಸೋಸ್ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಗರದ ಅಂಗಡಿಯೊಂದರಿಂದ 42 ಸಾವಿರ ರೂ. ದಂಡ ವಸೂಲಿv ಮಾಡಲಾಗಿದೆ ಎಂದು ತಿಳಿದು ಬಂದಿದೆ.ಆಹಾರ ಸುರಕ್ಷಾ ಇಲಾಖೆಯ ಅಧಿಕಾರಿಗಳು ಮಾರ್ಕೆಟ್ ರಸ್ತೆಯ ಅಂಗಡಿಯೊಂದರ ವಿರುದ್ಧ ದಂಡ ವಿಧಿಸಿದೆ. ಕಾಸರಗೋಡು ಸಬ್ ಡಿವಿಷನ್ ಮೇಜಿಸ್ಟ್ರೆಟ್ ಪಿ. ಬಿನುಮೋಲ್ ದಂಡ ವಿಧಿಸಿದ್ದಾರೆ.2023 ಸೆ.16 ರಂದು ಆಹಾರ ಸುರಕ್ಷಾ ಇಲಾಖೆಯ ಸರ್ಕಲ್ ಆಫೀಸರ್ ಅಂಗಡಿ ತಪಾಸಣೆ ನಡೆಸಿದ್ದರು. ಗ್ರೀನ್ ಚಿಲ್ಲಿ ಸೋಸ್ ನ ಮಾದರಿ ಸಂಗ್ರಹಿಸಿದ್ದಾರೆ