ಕಾಸರಗೋಡು: ಕಾಂಞಂಗಾಡ್-ರಾವಣೇಶ್ವರ ಪ್ರದೇಶದ ಒಟ್ಟು ನಾಲ್ಕು ದೇವಸ್ಥಾನಗಳಿಂದ ಕಳವು ಮಾಡಲಾಗಿದ್ದು, ಈ ಸಂಬಂಧ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಮಡಿಯನ್ ಕುಲೋಂ ಕ್ಷೇತ್ರಪಾಲಕ ದೇವಸ್ಥಾನ, ರಾವಣೇಶ್ವರ ಪೆರುಂ ತೃಕೋವಿಲ್ ಅಪ್ಪನ್ ದೇವಸ್ಥಾನ, ಚಿತ್ತಾರಿ ರಾಮನ್‌ಕುನ್ನು ಅಯ್ಯಪ್ಪ ಭಜನ ಮಠ ಹಾಗೂ ರಾವಣೇಶ್ವರದ ಇನ್ನೊಂದು ದೇವಸ್ಥಾನದಿಂದ ಕಳವು ಮಾಡಲಾಗಿದೆ.
ಚಿತ್ತಾರಿ ರಾಮನ್‌ಕುನ್ನು ಅಯ್ಯಪ್ಪ ಭಜನ ಮಠದಿಂದ 10 ಸಾವಿರ ರೂ. ಹಾಗು ಭಂಡಾರದಿಂದ 2000 ರೂ. ಕಳವು ಮಾಡಲಾಗಿದೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪ್ರಾಪ್ತ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.




