
ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗು ಮೂಡಪ್ಪ ಸೇವೆಯ ಕಾರ್ಯಕ್ರಮದ ಯಶಸ್ಸಿಗೆ ಕಾಸರಗೋಡು ನಗರ ಅಲಂಕಾರ, ಸ್ವಾಗತ ದ್ವಾರ, ವಿದ್ಯುತ್ ಅಲಂಕಾರ ತಯಾರಿಗೆ ನಗರದ ಎಲ್ಲ ಸಂಘ- ಸಂಸ್ಥೆ ಹಾಗೂ ಅಟೋ, ಟ್ಯಾಕ್ಸಿ ಸ್ಟಾಂಡ್ ಇದರ ಪದಾಧಿಕಾರಿಗಳ ವಿಶೇಷ ಸಭೆ ಕರಂದಕ್ಕಾಡು ಶಿವಾಜಿ ನಗರದ ವೀರ ಹನುಮಾನ್ ಮಂದಿರದಲ್ಲಿ ಮಂದಿರದ ಅಧ್ಯಕ್ಷ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. 25ಕ್ಕಿಂತಲೂ ಅಧಿಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಹೊಸ ಬಸ್ ನಿಲ್ದಾಣ, ಅಡ್ಕತ್‌ಬೈಲು, ತಾಲೂಕು ಕಚೇರಿ ಭಾಗ, ಮಧೂರು ರಸ್ತೆಯ ಕೃಷ್ಣ ಟಾಕೀಸ್ ತನಕ ಅಲಂಕಾರ ಮಾಡಲುತೀರ್ಮಾನಿಸಲಾಯಿತು.

ಬ್ರಹ್ಮಕಲಶೋತ್ಸವ ಕೇಂದ್ರ ಸಮಿತಿಯ ಉಪಾಧ್ಯಕ್ಷ ಡಾ ಕೆ.ಎನ್.ವೆಂಕಟ್ರಮಣ ಹೊಳ್ಳ, ಸದಸ್ಯರಾದ ಕೇಶವ, ವೀ ಹನುಮಾನ್ ಮಂದಿರದ ರೂವಾರಿ ರವಿ ಕರಂದಕ್ಕಾಡ್ ಕಾರ್ಯಕ್ರಮವನ್ನು ನಿರೂಪಿಸಿದರು. ಕರಂದಕ್ಕಾಡ್ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಹರೀಶ್ ಕೆ.ಆರ್. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಳೆಬೈಲು ಅವರು ವಂದಿಸಿದರು.




