Kasaragodu: : ಮನೆ ಮುಂದೆ ಪಟಾಕಿ ಸಿಡಿಸಿದಕ್ಕೆ ವಾಗ್ವಾದ – ನಾಲ್ವರಿಗೆ ಚೂರಿ ಇರಿತ

Share with

ಕಾಸರಗೋಡು: ಮನೆ ಮುಂದೆ ಪಟಾಕಿ ಸಿಡಿಸಿದ ಬಗ್ಗೆ ಪ್ರಶ್ನಿಸಿದ ದ್ವೇಷದಿಂದ ತಂದೆ, ಮಗ ಸಹಿತ ನಾಲ್ವರಿಗೆ ಇರಿದ ಘಟನೆ ಚೆಂಗಳ ನಾಲ್ಕನೇ ಮೈಲಿನಲ್ಲಿ ನಡೆದಿದೆ.


ಇರಿತದಿಂದ ಗಾಯಗೊಂಡ ಚೆಂಗಳ ಸಿಟಿಜನ್ ನಗರದ ಇಬ್ರಾಹಿಂ ಸೈನುದ್ದೀನ್(42), ಅವರ ಪುತ್ರ ಫವಾಸ್ (20), ಇವರ ಸ್ನೇಹಿತರಾದ ತೈವಳಪ್ಪನ ರಝಾಕ್(50) ಹಾಗು ಸಿಟಿಜನ್ ನಗರದ ಮುನ್ಶಿàದ್ ಪಿ.ಎ(28) ಅವರಿಗೆ ಇರಿದು ಗಾಯಗೊಳಿಸಲಾಗಿದೆ.


ಗಾಯಾಳು ಫವಾಸ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಚೆಂಗಳದ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಗಾಯಾಳು ಇಬ್ರಾಹಿಂ ನೀಡಿದ ದೂರಿನಂತೆ ಅಬ್ದುಲ್ ಖಾದರ್, ಮೊದೀನ್, ನಫೀನ್ ಸಹಿತ 10 ಮಂದಿ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ. ತನ್ನ ಮನೆಯ ಮುಂದೆ ಕೆಲವರು ಸೇರಿ ಪಟಾಕಿ ಸಿಡಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ದ್ವೇಷದಿಂದ ಮಾರಕಾಯುಧಗಳಿಂದ ಇರಿದು ಗಾಯಗೊಳಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.


Share with

Leave a Reply

Your email address will not be published. Required fields are marked *