Kasaragodu: ಮನೆಗೆ ಬೆಂಕಿ ತಗಲಿ ಲಕ್ಷಾಂತರ ರೂ.ಗಳ ನಷ್ಟ

Share with

ಕಾಸರಗೋಡು: ಮನೆಗೆ ಬೆಂಕಿ ತಗಲಿ ಲಕ್ಷಾಂತರ ರೂ.ಗಳ ನಾಶನಷ್ಟ ಉಂಟಾದ ಘಟನೆ ನೆಲ್ಲಿಕಟ್ಟೆ ಸಮೀಪದ ಚಂದ್ರಂಪಾರದಲ್ಲಿ ಮಾ.19 ರಂದು ನಡೆದಿದೆ.

ಚಂದ್ರಂಪಾರದ ಶಾಫಿ ಎಂಬವರ ಮನೆಯಲ್ಲಿ ಈ ಬೆಂಕಿ ಅನಾಹುತ ನಡೆದಿದೆ. ಮನೆಯ ಅಡುಗೆ ಕೊಠಡಿಯೊಳಗಿದ್ದ ಫ್ರಿಡ್ಜ್ ಗ್ರೈಂಡರ್, ವಾಶಿಂಗ್ ಮೆಶಿನ್, ಸ್ಟವ್ ಸೇರಿದಂತೆ ಮನೆ ಸಾಮಗ್ರಿಗಳು ಬೆಂಕಿಗಾಹುತಿಯಾಗಿದೆ.

ಅಗ್ನಿಶಾಮಕ ದಳ ತಕ್ಷಣ ಘಟನೆ  ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದೆ.  ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿಕೊಂಡಿರಬಹುದೆಂದು ಶಂಕಿಸಲಾಗುತ್ತಿದೆ.


Share with

Leave a Reply

Your email address will not be published. Required fields are marked *