ಮಂಜೇಶ್ವರ : ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ,ತೂಮಿನಾಡು ಕುಂಜತ್ತೂರು ಇದರ 40ನೇ ವಾರ್ಷಿಕ ಮಹಾಸಭೆಯು ಜಿಲ್ಲಾ ಕುಲಾಲ ಸಮುದಾಯ ಭವನ ತೂಮಿನಾಡು ಕುಂಜತ್ತೂರುನಲ್ಲಿ ಜರಗಿತು.ಕು. ರಶ್ಮಿತಾ ಹಾಗೂ ಕು. ಭುವಿರವರ ಪ್ರಾಥನೆಯೊಂದಿಗೆ ಸಭೆ ಪ್ರಾರಂಭವಾಯಿತು.ಸಭೆಯ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷರಾದ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ವಹಿಸಿದರು.ಜಿಲ್ಲಾ ಕುಲಾಲ ಸಂಘದ ಕಾರ್ಯದರ್ಶಿ ದಾಮೋದರ ಮಾಸ್ಟರ್ ಕಬ್ಬಿನಹಿತ್ಲು,ಜಿಲ್ಲಾ ಕುಲಾಲ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಸಂಘದ ಕೋಶಾಧಿಕಾರಿ ಬಾಲಕೃಷ್ಣ ದೀಕ್ಷಾ ಉಪಸ್ಥಿತರಿದ್ದರು. ದಾಮೋದರ ಮಾಸ್ಟರ್ ಕಬ್ಬಿನಹಿತ್ಲು ವರದಿ ವಾಚನ ಹಾಗೂ ಈಶ್ವರ್ ಕಣ್ವತೀರ್ಥ ರವರು ಲೆಕ್ಕ ಪತ್ರ ಮಂಡನೆ ಮಾಡಿದರು.ಸಂಘಟನಾ ಸಂಚಾಲಕ ಸುಧೀರ್ ರಂಜನ್ ದೈಗೋಳಿ ಸ್ವಾಗತಿಸಿ ,ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ಟರ್ ಕಬ್ಬಿನಹಿತ್ಲು ವಂದಿಸಿದರು.