ಮಂಗಳೂರು: ರಾಜ್ಯದಲ್ಲಿ ಕಾವೇರಿ ನೀರನ್ನು ತಮಿಳು ನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಸೆ.29ರಂದು ವಿವಿಧ ಸಂಘಟನೆಗಳು ರಾಜ್ಯವ್ಯಾಪಿ ಬಂದ್ ಗೆ ಕರೆ ನೀಡಿವೆ.
ಆದರೆ ಕರಾವಳಿಯಲ್ಲಿ ಈ ಬಂದ್ ಪರಿಣಾಮ ಬೀರಲ್ಲ ಎನ್ನಲಾಗಿದೆ. ಬಂದ್ ಇದ್ದರೂ ಬಸ್‌ಗಳು ಎಂದಿನಂತೆ ಓಡಾಡಲಿವೆ ಎಂದು ಬಸ್ ಮಾಲಕರ ಸಂಘ ಹೇಳಿದೆ. ಬಂದ್‌ಗೆ ನಮ್ಮ ನೈತಿಕ ಬೆಂಬಲ ಇದೆ. ಆದರೆ ನಾವು ಬಸ್ ಓಡಿಸುತ್ತೇವೆ ಎಂದು ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಹೇಳಿದ್ದಾರೆ.
ಉಳಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇಲೂ ಬಂದ್ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ವ್ಯಾಪಾರಿಗಳು ಬಂದ್ ಕುರಿತಂತೆ ಯಾವುದೇ ಹೇಳಿಕೆ ನೀಡದಿದ್ದರೂ ಸಾಮಾನ್ಯವಾಗಿ ಇಂಥ ಬಂದ್‌ಗಳ ಸಂದರ್ಭದಲ್ಲಿ ಜನಜೀವನ ಸಾಮಾನ್ಯವಾಗಿರುತ್ತದೆ.