ಪುತ್ತೂರು: ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ, ಮಂಗಳೂರಿನ ಕೆನರಾ ಕಾಲೇಜು ಸಿಎ ಸೆಂಟರ್ ವಿದ್ಯಾರ್ಥಿ ಶ್ರೀವತ್ಸ ಬೈಪಾಡಿತ್ತಾಯ ಅವರು ಐಸಿಎಐ ಮೇ ನಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರಿಗೆ 36ನೇ ಚೆಂಬರ್ ಸಿ.ಎ ಕ್ಲಾಸಸ್‌ನ ಸಿ.ಎ ನಾಗಭೂಷಣ ಪೈ ಮಾರ್ಗದರ್ಶನ ನೀಡಿದ್ದಾರೆ. ಹಲವು ಸಂಸ್ಥೆಗಳಲ್ಲಿ ಇವರು ತರಬೇತಿ ಪಡೆದುಕೊಂಡಿದ್ದಾರೆ.
ಇವರು ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತಸರ ಶ್ರೀಧರ ಬೈಪಾಡಿತ್ತಾಯ ಮತ್ತು ವಿಜಯ ದಂಪತಿಯ ಪುತ್ರ.