ನೇಮಕಾತಿ ಸಂಸ್ಥೆ: ಕೇಂದ್ರೀಯ ವಿದ್ಯಾಲಯ ಸಂಘಟನೆ

ಹುದ್ದೆ: ವಿವಿಧ ಬೋಧಕ, ಬೋಧಕೇತರ ಹುದ್ದೆಗಳು (ಪ್ರಾಥಮಿಕ ಶಿಕ್ಷಕರು, ತರಬೇತಿ ಪಡೆದ ಪದವಿ ಶಿಕ್ಷಕರು, ಸ್ನಾತಕೋತ್ತರ ಶಿಕ್ಷಕರು, ಕಚೇರಿ ಸಿಬಂದಿ, ಲೆಕ್ಕಪತ್ರ ಸಂಬಂಧಿತ ಹುದ್ದೆಗಳನ್ನು ಒಳಗೊಂಡಿದೆ.)
ಒಟ್ಟು ಹುದ್ದೆಗಳು: 2,499
ನೇಮಕಾತಿ ಸ್ಥಳ: ದೇಶದಾದ್ಯಂತವಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ.
ವಿದ್ಯಾರ್ಹತೆ: ಆಯಾಯ ಹುದ್ದೆಗನುಗುಣವಾಗಿ 12ನೇ ತರಗತಿ, ಪದವಿ, ಬಿಕಾಂ, ಬಿಎಡ್, ಸಿಎ/ಐಸಿಡಬ್ಲ್ಯುಎ, ಪದವಿ ಶಿಕ್ಷಣ, ಸ್ನಾತಕೋತ್ತರ ಪದವಿ, ಎಂಬಿಎ ಮುಂತಾದ ವಿದ್ಯಾರ್ಹತೆಗಳನ್ನು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯಗಳಿಂದ ಪಡೆದಿರಬೇಕು.
ವಯೋಮಿತಿ: ಮುಖ್ಯೋಪಾಧ್ಯಾಯ ಹುದ್ದೆಗೆ ಕನಿಷ್ಠ 35 ವರ್ಷ. ಉಳಿದ
ಹುದ್ದೆಗಳಿಗೆ ಕೇಂದ್ರೀಯ ವಿದ್ಯಾಲಯ ಸಂಘಟನೆಗಳ ನಿಯಮಾವಳಿ ಪ್ರಕಾರ ಕನಿಷ್ಠ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ. ಸರಕಾರಿ ನಿಯಮಾವಳಿಗನುಗುಣವಾಗಿ ಮೀಸಲಾತಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಅರ್ಜಿ ಸಲ್ಲಿಸಲು ಕೊನೇ ದಿನಾಂಕ: 26-12-25




