
ಪುತ್ತೂರು: ಕೇಪುಳು ನಿವಾಸಿ ಜನಾರ್ದನ (ಶೇಷಪ್ಪ) ಬಂಗೇರ
(80ವ.) ಹೃದಯಾಘಾತದಿಂದ ನ.1ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಬೀರ್ನಹಿತ್ಲುವಿನಲ್ಲಿ ಶೇಂದಿ ಅಂಗಡಿ ಹೊಂದಿದ್ದ ಅವರು ಬಿಲ್ಲವ ಸಂಘ, ಮೂಡಾಯೂರು ಆರಿಗೋ ಗರಡಿಯ ಸಮಿತಿಯಲ್ಲಿ ಸಕ್ರಿಯರಾಗಿದ್ದರು.
ಮೃತರು ಪತ್ನಿ ಸುಮತಿ, ಪುತ್ರರಾದ ವಿವೇಕಾನಂದ ಕಾಲೇಜಿನ ಉಪನ್ಯಾಸಕ ವಿಶ್ವನಾಥ, ಶರತ್, ಪುತ್ರಿಯರಾದ ಜ್ಯೋತಿ, ಅರುಣಾ, ಯಶೋಧ ಹಾಗೂ ರಂಜಿನಿಯವರನ್ನು ಅಗಲಿದ್ದಾರೆ. ವಿದೇಶದಲ್ಲಿರುವ ಪುತ್ರಿ ಬಂದ ಬಳಿಕ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.





