ಮಲ್ಲಪುರಂ (ಕೇರಳ): ಕೇರಳದ ನಿಲಾಂಬುರ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಕಾಂಗ್ರೆಸ್‌ನ ಆರ್ಯಧನ ಶೌಕಾತ್ ಅವರು ಸಮೀಪದ ಪ್ರತಿಸ್ಪರ್ಧಿ ಆಡಳಿತಾರೂಢ ಸಿಪಿಐ (ಎಂ) ಪಕ್ಷದ ಎಂ.ಸ್ವರಾಜ್ ಅವರ ಎದುರು 11 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಎಲ್‌ಡಿಎಫ್ ಬೆಂಬಲಿತ ಪಕ್ಷೇತರ ಶಾಸಕ, ಪಿ.ವಿ. ಅನ್ವರ್ ರಾಜೀನಾಮೆ ನೀಡಿದ್ದ ಕಾರಣ ನಿಲಾಂಬುರ್ ಕ್ಷೇತ್ರ ತೆರವಾಗಿತ್ತು,
ಎಲ್‌ಡಿಎಫ್ ಪಕ್ಷ ಉಪಚುನಾವಣೆಯಲ್ಲಿ ಸೋಲುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ. ಈ ಹಿಂದೆ ಪುತ್ತುಪ್ಪಲ್ಲಿ, ಪಾಲಕ್ಕಾಡ್ ಮತ್ತು ತ್ರಿಕ್ಕಾಕಾರ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆ ವೇಳೆ ಸೋಲುಂಡಿತ್ತು.