ಪೊಲೀಸರಿಂದ ತಪ್ಪಿಸಿಕೊಳ್ಳಲು  MDMA ಡ್ರಗ್ ನುಂಗಿದ ಕೇರಳದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು!

Share with

 

ಕೇರಳ : ಪೊಲೀಸರಿಗೆ ಹೆದರಿ ಡ್ರಗ್ಸ್ ಪ್ಯಾಕೆಟ್ ನುಂಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಯುವಕನೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೊಯಿಕ್ಕೋಡ್‌ನ ಮೈಕಾವು ನಿವಾಸಿ ಶನಿದ್ (28) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.

ಈತ ಶುಕ್ರವಾರ ಥಮರಸ್ಸೆರಿ ಬಳಿ ಪೊಲೀಸರನ್ನು ಕಂಡು ಹೆದರಿ ಡ್ರಗ್ ನ ಎರಡು ಪ್ಯಾಕೆಟ್‌ಗಳನ್ನು ನುಂಗಿದ್ದ. ಈತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಕೊಯಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿ, ಎಂಡೊಸ್ಕೊಪಿ ಮಾಡಿಸಿದಾಗ ಹೊಟ್ಟೆಯಲ್ಲಿ ಬಿಳಿ ಗ್ರಾನ್ಯೂಲ್ ಗಳು ಕಂಡುಬಂದಿದ್ದವು.

ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈತ ಡ್ರಗ್ಸ್ ಸಂಬಂಧಿತ ಹಲವು ಅಪರಾಧಗಳಲ್ಲಿ ತೊಡಗಿದ್ದ ಎಂದಿದ್ದಾರೆ.


Share with

Leave a Reply

Your email address will not be published. Required fields are marked *