ಕೋಯಿಕ್ಕೋಡ್ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದ್ದು, ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
ನೆಲಮಹಡಿಯ ಎಂಆರ್‌ಐ ವಿಭಾಗದ ಬಳಿ ರಾತ್ರಿ 8 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಯುಪಿಎಸ್ ಅಸಮರ್ಪಕ ವ್ಯವಸ್ಥೆಯಿಂದ ಬೆಂಕಿ ಕಾಣಿಸಿಕೊಂಡಿರುವ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ. ಬೆಂಕಿಯಿಂದ ದಟ್ಟವಾದ ಹೊಗೆ ವಾರ್ಡ್‌ನಾದ್ಯಂತ ಹರಡಿದ್ದು, ಇದರಿಂದ ಹಲವು ವ್ಯಕ್ತಿಗಳು ಉಸಿರಾಟದ ತೊಂದರೆಯನ್ನು ಅನುಭವಿಸಿದ್ದಾರೆ ಎನ್ನಲಾಗಿದೆ.