Kerala: ಶಾಲಾ ವಾರ್ಷಿಕ ರಜೆ ಏಪ್ರಿಲ್ –ಮೇ ಬದಲು ಜೂನ್–ಜುಲೈ ಗೆ?

Share with

ತಿರುವನಂತಪುರಂ: ಶಾಲೆಗಳ ವಾರ್ಷಿಕ ರಜಾ ದಿನಗಳನ್ನು ಏಪ್ರಿಲ್-ಮೇ ಬದಲಾಗಿ ಜೂನ್ ಮತ್ತು ಜುಲೈ ತಿಂಗಳಲ್ಲಿ ನೀಡಬಹುದೇ ಎಂದು ಕೇರಳದ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಚರ್ಚೆ ಹುಟ್ಟುಹಾಕಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ರಾಜ್ಯದಲ್ಲಿ ತೀವ್ರ ಬಿಸಿಲಿನ ಪರಿಸ್ಥಿತಿಯಿರುವ ಸಂದರ್ಭದಲ್ಲಿ ಮಕ್ಕಳಿಗೆ ರಜೆ ನೀಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಇದರ ಬದಲಾಗಿ, ಭಾರಿ ಮಳೆಯಿಂದಾಗಿ ಅದೆಷ್ಟೋ ದಿನಗಳ ಕಾಲ ತರಗತಿಗಳೇ ರದ್ದಾಗುವ ಜೂನ್-ಜುಲೈ ಅವಧಿಯಲ್ಲಿ ರಜೆ ನೀಡಬಾರದೇಕೆ?’ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಅವರು ಸಾರ್ವಜನಿಕರ ಅಭಿಪ್ರಾಯವನ್ನು ಕೋರಿದ್ದಾರೆ.


Share with

Leave a Reply

Your email address will not be published. Required fields are marked *