ಮಂಜೇಶ್ವರ: ಕೇರಳ ಸ್ಟೇಟ್ ಸರ್ವೀಸ್ ಪೆನ್ಯನರ್ಸ್ ಯೂನಿಯನ್ ಮಂಜೇಶ್ವರ ಘಟಕ ವಾರ್ಷಿಕ ಮಹಾಸಭೆ

Share with

ಮಂಜೇಶ್ವರ: ಕೇರಳ ಸ್ಟೇಟ್ ಸರ್ವಿಸ್ ಪೆನ್ಯ ನರ್ಸ್ ಯೂನಿಯನ್ ಮಂಜೇಶ್ವರ ಘಟಕದ ವಾರ್ಷಿಕ ಮಹಾಸಭೆ ಹೊಸಂಗಡಿ ಶ್ರೀ ನಿತ್ಯಾನಂದ ಧ್ಯಾನ ಮಂದಿರದಲ್ಲಿ ಘಟಕದ ಅಧ್ಯಕ್ಷೆ ಸುಲೋಚನಾ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಕೇರಳ ಸ್ಟೇಟ್ ಸರ್ವೀಸ್ ಪೆನ್ಯನರ್ಸ್ ಯೂನಿಯನ್ ಮಂಜೇಶ್ವರ ಘಟಕ ವಾರ್ಷಿಕ ಮಹಾಸಭೆ

ಜಿಲ್ಲಾ ಕೋಶಾಧಿಕಾರಿ ಗೋಪಾಲಕೃಷ್ಣನ್ ಉದ್ಘಾಟಿಸಿದರು. ಬ್ಲೋಕ್ ಅಧ್ಯಕ್ಷರಾದ ರವಿಚಂದ್ರ ಕಾರ್ಯದರ್ಶಿ ಶೀನಪ್ಪ ಪೂಜಾರಿ ಅಲಾರ್ ದುರ್ಗಿಪಳ್ಳ, ಮಾಜಿ ಅಧ್ಯಕ್ಷರಾದ ಶ್ರೀ ಭಾಟಿಯಾ, ಬ್ಲೋಕ್ ಉಪಾಧ್ಯಕ್ಷ ರವೀಂದ್ರನಾಥ್ ನಾಯಕ್ ಶೇಣಿ, ಭಾಸ್ಕರ ರಾವ್ ಕೆಡೆಂಜಿ ಮೊದಲಾದವರು ಉಪಸ್ಥರಿದ್ದರು.

ಘಟಕದ ಕಾರ್ಯದರ್ಶಿ ಶಶಿಕಲಾ ಟೀಚರ್ ಸ್ವಾಗತಿಸಿದರು. ನೇತಾರರು ತಮ್ಮ ಭಾಷಣದಲ್ಲಿ ಪಿಂಚಣಿದಾರರ ಸವಲತ್ತುಗಳನ್ನು ತಡೆಹಿಡಿದ ಕೇರಳ ಸರಕಾರದ ಧೋರಣೆಗಳನ್ನು ಖಂಡಿಸಿದರು ಮತ್ತು ಕೂಡಲೇ ತಡೆಹಿಡಿದ ಸವಲತ್ತುಗಳನ್ನು ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿದರು.

ಮೆಡಿಸೆಪ್ ನ ನ್ಯೂನತೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು. ನಂತರ ಮುಂದಿನ ವರ್ಷದ ಪದಾಧಿಕಾರಿಗಳ ಚುನಾವಣೆಯನ್ನು ಚುನಾವಣಾಧಿಕಾರಿ ಸದಾಶಿವ ರಾವ್ ಅವರು ನಡೆಸಿಕೊಟ್ಟರು. ಶ್ರೀ ಉದಯಶಂಕರ ಭಟ್ ಅಧ್ಯಕ್ಷರಾಗಿ ಮತ್ತು ಪುಂಡಲೀಕ ನಾಯಕ್ ಕಾರ್ಯದರ್ಶಿ ಸೇರಿ 21 ಮಂದಿ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷ ಉದಯಶಂಕರ ಭಟ್ ಧನ್ಯವಾದ ನೀಡಿದರು.


Share with

Leave a Reply

Your email address will not be published. Required fields are marked *