ಮಂಜೇಶ್ವರ :ಕೇರಳ ತುಳು ಅಕಾಡೆಮಿ ವತಿಯಿಂದ ತಾರೀಕು 11-8-2024 ರಂದು ಪಾವೂರು ಸಮೀಪದ ಬಚ್ಚುವಳಿಕೆ “”ಸ್ನೇಹಾಲಯ””ದಲ್ಲಿ ನಡೆಯುವ ಆಟಿ ತಿಂಗಳ ವಿಶೇಷ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಉಪ್ಪಳ ಕೊಂಡವೂರು ನಿತ್ಯಾನಂದ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ತುಳು ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳಿಗೆ ತನ್ನ ಸದಾ ಬೆಂಬಲ, ಆಶೀರ್ವಾದವಿದೆಯೆಂದರು. ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲೆಂದು ಹಾರೈಸಿದರು.ಅಕಾಡೆಮಿ ಅಧ್ಯಕ್ಷರಾದ ಶ್ರೀ ಕೆ. ಆರ್. ಜಯಾನಂದರವರು ಮೊದಲ ಆಮಂತ್ರಣ ಪತ್ರವನ್ನು ಸ್ವಾಮೀಜಿಯವರಿಗೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಅಕಾಡೆಮಿ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಬಿ., ಸಾಮಾಜಿಕ ಕಾರ್ಯಕರ್ತರಾದ ವಿನಯ ಕುಮಾರ್ ಬಾಯಾರ್ ಉಪಸ್ಥಿತ ರಿದ್ದರು.