ಕೇರಳದ PFI ಹಿಟ್ ಲಿಸ್ಟ್​​ ಭಯಾನಕ.. ಜಡ್ಜ್​ಗಳು, ಕಾರ್ಯಕರ್ತರು ಸೇರಿ 977 ವ್ಯಕ್ತಿಗಳ ಟಾರ್ಗೆಟ್​​​!

Share with

ಕೇರಳದ ಪಿಎಫ್‌ಐ ಹಿಟ್ ಲಿಸ್ಟ್​​ನಲ್ಲಿ ಬರೋಬ್ಬರಿ 977 ಹೆಸರುಗಳು ಇವೆ. ಜಡ್ಜ್​ಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರ ಜೀವ ತೆಗೆಯಲು ಪಟ್ಟಿಯನ್ನು ಪಿಎಫ್ಐ ಸಿದ್ಧಪಡಿಸಿತ್ತು ಎಂಬ ಅಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ಎನ್‌ಐಎನಿಂದ ಈ ಸ್ಫೋಟಕ ಮಾಹಿತಿ ಕೇರಳದ ಎನ್‌ಐಎ ಸ್ಪೆಷಲ್ ಕೋರ್ಟ್​​​ಗೆ ಸಲ್ಲಿಕೆ ಮಾಡಲಾಗಿದೆ.

ಪಾಲಕ್ಕಾಡ್ ಶ್ರೀನಿವಾಸನ್ ಜೀವ ತೆಗೆದ ಕೇಸ್​ನಲ್ಲಿ ಆರೋಪಿಗಳ ಜಾಮೀನು ಅರ್ಜಿಗೆ ಎನ್‌ಐಎ ವಿರೋಧ ವ್ಯಕ್ತಪಡಿಸಿ ಆಕ್ಷೇಪಣೆ ಸಲ್ಲಿಸಿದೆ. ಬಹಳಷ್ಚು ಹಿಟ್ ಲಿಸ್ಟ್ ಪಟ್ಟಿ ಸಿಕ್ಕಿದೆ ಎಂದು ಎನ್‌ಐಎ ಕೋರ್ಟ್​ಗೆ ತಿಳಿಸಿದೆ. ಅಘಾತಕಾರಿ ಮಟ್ಟದಲ್ಲಿ ಜನರ ಜೀವ ತೆಗೆಯಲು ಪಟ್ಟಿ ಸಿದ್ಧ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಎನ್‌ಐಎ ಹೇಳಿದೆ. ಪಾಲಕ್ಕಾಡ್ ಶ್ರೀನಿವಾಸನ್ ಪ್ರಕರಣದ ಆರೋಪಿಗಳಾದ ಮೊಹಮ್ಮದ್ ಬಿಲಾಲ್, ರಿಯಾಸುದ್ದೀನ್ ಜಾಮೀನು ಅರ್ಜಿಗೆ ಎನ್‌ಐಎ ವಿರೋಧ ವ್ಯಕ್ತಪಡಿಸಿ, ಸ್ಫೋಟಕ ಮಾಹಿತಿಯನ್ನು ಕೋರ್ಟ್​​ಗೆ ಸಲ್ಲಿಸಿದೆ.

ಪಿಎಫ್‌ಐನಲ್ಲಿ ಯಾಱರನ್ನು ಟಾರ್ಗೆಟ್ ಮಾಡಬೇಕೆಂದು ಪಟ್ಟಿ ತಯಾರಿಸುವ ರಿಪೋರ್ಟರ್ ವಿಂಗ್ ಇದೆ. ರಿಪೋರ್ಟರ್ ವಿಂಗ್​​ನಲ್ಲಿ ಸಿರಾಜುದ್ದೀನ್ ಸದಸ್ಯನಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ. ರಿಪೋರ್ಟರ್ ವಿಂಗ್​​ನಿಂದ 240 ಜನರ ಲಿಸ್ಟ್ ರೆಡಿ ಆಗಿತ್ತು. ಕೇರಳದ ಮಾಜಿ ಜಿಲ್ಲಾ ನ್ಯಾಯಾಧೀಶರು ಪಿಎಫ್‌ಐ ಹಿಟ್ ಲಿಸ್ಟ್​​ನಲ್ಲಿದ್ದಾರೆ ಎಂದು ಎನ್‌ಐಎ ಕೋರ್ಟ್​ಗೆ ಹೇಳಿದೆ. ಅಬ್ದುಲ್ ವಹಾಬ್ ಎಂಬ ಮತ್ತೊಬ್ಬ ಆರೋಪಿಯ ವ್ಯಾಲೆಟ್​​ನಿಂದ ಹಿಟ್ ಲಿಸ್ಟ್ ಸೀಜ್ ಮಾಡಿದ್ದಾಗಿ ಎನ್‌ಐಎ ಹೇಳಿದೆ.

ಮತ್ತೊಬ್ಬ ಪರಾರಿಯಾದ ಆರೋಪಿ ಅಬ್ದುಲ್ ತಹಾ ಮನೆಯಲ್ಲಿ 500 ಮಂದಿಯ ಹಿಟ್ ಲಿಸ್ಟ್ ವಶಕ್ಕೆ ಪಡೆಯಲಾಗಿದೆ. ಕಾನೂನು, ರಾಜಕೀಯ, ಕಾರ್ಯಕರ್ತರು ಸೇರಿ ವಿವಿಧ ವಲಯಗಳ ಜನರು ಪಿಎಫ್ಐ ಹಿಟ್ ಲಿಸ್ಟ್​​ನಲ್ಲಿದ್ದಾರೆ. ರಿಪೋರ್ಟರ್ ವಿಂಗ್, ಇಂಟಲಿಜೆನ್ಸ್ ಮಾಹಿತಿಯನ್ನು ಪಿಎಫ್‌ಐಗಾಗಿ ಸಂಗ್ರಹಿಸಿದೆ. ಟಾರ್ಗೆಟ್ ಆಗಿದ್ದ ವ್ಯಕ್ತಿಗಳ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿದೆ. ಕೇರಳದ ಅಲುವ ಪೆರಿಯಾರ್ ವ್ಯಾಲಿ ಕ್ಯಾಂಪಸ್​ನಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಿದೆ ಎಂದು ಎನ್‌ಐಎ ನಿಂದ ದಾಖಲೆ ಸಲ್ಲಿಸಿ ವಾದ ಮಾಡಲಾಗಿದೆ. ಆರೋಪಿಗಳ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಹೈಪ್ರೊಫೈಲ್ ಟಾರ್ಗೆಟ್​​ಗಳನ್ನು ಮಾಡಿ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಎನ್‌ಐಎ ವಾದ ಮಾಡಿದೆ.

ತಾವು ಮುಗ್ದರು, ಅಮಾಯಕರು, ತಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂದು ಆರೋಪಿಗಳ ಪರ ವಕೀಲರ ವಾದ ಮಂಡಿಸಿದ್ದರು. ಆದರೇ, ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಮೇಲ್ನೋಟಕ್ಕೆ ಸತ್ಯಾಂಶ ಕಂಡು ಬಂದಿದೆ ಎಂದು ಕೋರ್ಟ್ ಹೇಳಿದೆ. ಹೀಗಾಗಿ ಆರೋಪಿಗಳಿಗೆ ಜಾಮೀನು ನಿರಾಕರಿಸಿ ಎನ್‌ಐಎ ಸ್ಪೆಷಲ್ ಕೋರ್ಟ್ ಜಡ್ಜ್ ಮೋಹನ್ ದಾಸ್ ಆದೇಶ ನೀಡಿದ್ದಾರೆ. ಆರೋಪಿಗಳಿಗೆ ಜಾಮೀನು ನೀಡಿದರೇ, ರಿಸ್ಕ್ ಎದುರಾಗುತ್ತೆ ಎಂದು ಕೋರ್ಟ್ ಹೇಳಿದೆ.


Share with

Leave a Reply

Your email address will not be published. Required fields are marked *