ಮಂಜೇಶ್ವರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಮಂಜೇಶ್ವರ ತಾಲ್ಲೂಕು ಅಖಿಲ ಕರ್ನಾಟಕ ಜನ ಜಾಗ್ರತಿ ವೇದಿಕೆ ಬೆಳ್ತಂಗಡಿ. ಕಿದೋರು ಶ್ರೀ ಮಹಾದೇವ ನವಜೀವನ ಸಮಿತಿ ಕಳತೂರು. ಇವರ ಸಂಯುಕ್ತ ಆಶ್ರಯದಲ್ಲಿ ಪರಮ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆ ಮಾತೃ ಶ್ರೀ ಹೇಮಾವತಿ ವಿ ಹೆಗ್ಗಡೆಯವರ ಶುಭ ಆಶೀರ್ವಾದೊಂದಿಗೆ °ಕೇಸರ್ ಕಂಡೊಡು ಕುಸಲ್ದ ಗೊಬ್ಬುಲು ° ಕಾರ್ಯಕ್ರಮವು ಕುಂಬಳೆ ಕಳತ್ತೂರು ಗದ್ದೆಯಲ್ಲಿ ಆಯೋಜನೆ ಮಾಡಲಾಯಿತು. ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಕಾರ್ಯದರ್ಶಿ ಹಾಗೂ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರುಶ್ರೀ ವಿವೇಕ್ ವಿನ್ಸಟ್ ಪಾಯಸ್ ದೀಪ ಬೆಳಗಿಸಿ ಉದ್ಘಾಟಿಸಿದರು ನವಜೀವನ ಸಮಿತಿ ಸದಸ್ಯರು ಒಟ್ಟು ಸೇರಿಆಯೋಜಿಸಿದ ಈ ಕಾರ್ಯಕ್ರಮ ನಮ್ಮ ರಾಜ್ಯಕ್ಕೆ ಮಾದರಿ ಕಾರ್ಯಕ್ರಮ ಎಂದು ಪ್ರಸಂಸೆ ವ್ಯಕ್ತ ಪಡಿಸಿದರು. ಸಭೆಯ ಅಧ್ಯಕ್ಷೆತೆಯನ್ನು ಮಂಜೇಶ್ವರ ತಾಲ್ಲೂಕು ಜನಜಾಗೃತಿ ಅಧ್ಯಕ್ಷರು ಶ್ರೀ ಜಯಪ್ರಕಾಶ್ ನಾರಾಯಣ ತೋಟ್ಟೆತೋಡಿ ವಹಿಸಿದರು. ದುಶ್ಚಟದಿಂದ ಮುಕ್ತಿ ಹೊಂದಿರುವ ಎಲ್ಲರೂ ಸಮಾಜ ಕ್ಕೆ ಒಳಿತು ಮಾಡುವ ಸಂಕಲ್ಪ ಮಾಡಬೇಕೆಂದು ಮಾಹಿತಿ ನೀಡಿದರು. ಯೋಜನೆಯ ಜಿಲ್ಲಾ ನಿರ್ದೇಶಕರು ಶ್ರೀ ಪ್ರವೀಣ್ ಕುಮಾರ್ ರವರು ಕ್ರೀಡಾಕೂಟವನ್ನು ಮುಟ್ಟಲೇ ತೋಡಿಸಿ ಉದ್ಘಾಟಿಸಿ ನವಜೀವನ ಸಮಿತಿ ಸದಸ್ಯರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.. ತುಳುಸಾಹಿತ್ಯ ಪರಿಷತ್ ಸದಸ್ಯರು ಶ್ರೀ ಶ್ರೀನಿವಾಸ್ ಆಳ್ವ ರವರು ತುಳು ಜನರ ಬದುಕು ಹಿರಿಯರು ಕಳಿಸಿಕೊಟ್ಟ ಸಂಸ್ಕಾರ ಸಂಸ್ಕೃತಿ ಬಗ್ಗೆ ಮಾತಾಡಿದರು. ಕಾಸರಗೋಡು ತಾಲ್ಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರು ಶ್ರೀ ಅಖಿಲೇಶ್ ನಗುಮುಗ ರವರು ಮನುಷ್ಯನ ಜೀವನ ಹೇಗಿರಬೇಕು ಮತ್ತು ಹೇಗೆ ಜೀವಿಸಬೇಕು ಎಂಬ ಬಗ್ಗೆ ತಿಳುವಳಿಕೆ ಮಾತು ಹೇಳಿದರು.. ಕುಂಬ್ಳೆ ಗ್ರಾಮ ಪಂಚಾಯತ್ ಸದಸ್ಯರು ಶ್ರೀ ಮತಿ ಪುಷ್ಪಲತಾ ಹಾಗೂ ರವಿರಾಜ್ ಶುಭ ಹಾರೈಸಿದರು. ನಿಕಟ ಪೂರ್ವ ಸದಸ್ಯರು ಶ್ರೀ ಸುಕೇಶ್ ಭಂಡಾರಿ ಉಪಸ್ಥಿತರಿದ್ದರು. ತಾಲ್ಲೂಕು ಯೋಜನಾಧಿಕಾರಿ ಶ್ರೀ ಮತಿ ಶಶಿಕಲಾ ಸುವರ್ಣ ಸ್ವಾಗತಿಸಿ ಜನಜಾಗೃತಿ ವೇದಿಕೆ ಕಾಸರಗೋಡು ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷರು ಶ್ರೀ ಅಶ್ವಥ್ ಪೂಜಾರಿ ಲಾಲ್ ಬಾಗ್ ವಂದಿಸಿದರು. ದೇವಿಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು