ಪೆರ್ಲ: ಬಜಕೂಡ್ಲು ‘ಅಮೃತದೀಪ ಕೆಸರ್ ಕಂಡ ಉಚ್ಚಯ ಸಮಿತಿ ವತಿಯಿಂದ ಎರಡನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಆ. 13ರಂದು ಪೆರ್ಲ ಸನಿಹದ ಬಜಕೂಡ್ಲು ಆನೊರ್ದಿ ಪ್ಯಾಕೇಜ್ನ ಗದ್ದೆಯಲ್ಲಿ ಜರಗಲಿದೆ. ಇದರ ಆಮಂರ್ತಣಪತ್ರಿಕೆ ಬಿಡುಗಡೆ ಸಮಾರಂಭ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನೆರವೇರಿತು.
ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಜನಾರ್ಧನ ಪೂಜಾರಿ ಕಣ್ಣೂರು, ಹಿರಿಯ ಸದಸ್ಯ ಮಹಾಬಲ ರೈ ಬಜಕೂಡ್ಲು ಅವರಿಗೆ ಆಮಂತ್ರಣ ಪತ್ರಿಕೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು. ಎಣ್ಮಕಜೆ ಪಂಚಾಯಿತ್ ಸದಸ್ಯೆ ಉಷಾಗಣೇಶ್, ಮಹೇಶ್ವರಿ ಮಹಿಳಾ ಉಪಸ್ಥಿತರಿದ್ದರು.
ಸಮಾಜದ ನಳನಿ ರೈ, ಅಮೃತದೀಪ ಕೆಸರುಗದ್ದೆ ಉತ್ಸವ ಸಮಿತಿ ಪದಾಧಿಕಾರಿಗಳಾದ ಸದಾಶಿವ ಬಟ್ ಹರಿನಿಲಯ, ಚಂದ್ರಶೇಖರ ಆಚಾರ್ಯ, ಉದಯ ಚೆಟ್ಟಿಯಾರ್ ಬಜಕೂಡ್ಲು, ಪದ್ಮನಾಭ ಸುವರ್ಣ, ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸುಜಿತ್ ರೈ ಉಪಸ್ಥಿತಿರಿದ್ದರು.