ಬೆಂಗಳೂರು: ವಾರದ ಪಂಚಾಯತ್ನಲ್ಲಿ ಕಿಚ್ಚ ಸುದೀಪ್ (Bigg Boss Kannada 12) ಸ್ಪರ್ಧಿಗಳ ಸರಿ- ತಪ್ಪುಗಳ ಬಗ್ಗೆ ಮಾತನಾಡಿದ್ದಾರೆ. ಆ ಮೂಲಕ ಖಡಕ್ ಆಗಿಯೇ ಎಚ್ಚರಿಕೆ ನೀಡಿದ್ದಾರೆ.

ವೀಕ್ಷಕರಿಂದ ಸ್ಪರ್ಧಿಗಳಿಗೆ ಹಲವು ಪತ್ರಗಳು ಬಂದಿವೆ. ಧ್ರುವಂತ್ ಅವರಿಗೆ ಮನೆ ಬಿಟ್ಟು ಯಾಕೆ ಹೋಗುವ ನಿರ್ಧಾರ ಮಾಡಿದ್ದೀರಿ ಎನ್ನುವ ಬಗ್ಗೆ ಪ್ರಶ್ನೆ ಕೇಳಿದ್ದಾರೆ.
“ಕೆಲವೊಂದು ಬೇಡವಾದ ಆರೋಪಗಳನ್ನು ನಾನು ನಿರಂತವಾಗಿ ತೆಗೆದುಕೊಂಡೆ. ಇದರಿಂದ ನನಗೆ ತುಂಬಾ ಡ್ಯಾಮೇಜ್ ಆಯಿತು” ಎಂದು ಧ್ರುವಂತ್ ಹೇಳಿದ್ದಾರೆ.
ಇದಕ್ಕೆ ರಜತ್ ಅವರು ಮಧ್ಯ ಪ್ರವೇಶಿಸಿ, “ಡ್ಯಾಮೇಜ್ ಮಾಡಿಕೊಳ್ಳುತ್ತಿರುವುದೇ ಧ್ರುವಂತ್. ಅಸಭ್ಯವಾಗಿ ಮಾತನಾಡುತ್ತಿರುವುದು, ಅಸಭ್ಯವಾಗಿ ನಡೆದುಕೊಂಡು ತೋರಿಸುವುದು. ನಾನು ನೇರವಾಗಿ ಮಾತನಾಡುತ್ತೇನೆ ತಡೋ ಎಂದು ಹೇಳಿದ್ದಾರೆ.
ಇದನ್ನು ಕೇಳಿ ಧ್ರುವಂತ್ ಗರಂ ಆಗಿದ್ದಾರೆ. “ಇದು ತುಂಬಾ ತಪ್ಪಾದ ಹೇಳಿಕೆ. ನೀನು ತಡೋ, ನನ್ನ ಹತ್ರ ಇದನ್ನೆಲ್ಲ ಮಾತನಾಡೋಕೆ ಬರಬೇಡ. ಎಷ್ಟರಲ್ಲಿ ಇರಬೇಕೋ, ಅಷ್ಟರಲ್ಲೇ ಇರು” ಎಂದು ಗರಂ ಆಗಿಯೇ ಹೇಳಿದ್ದಾರೆ. ಕಿಚ್ಚನ ಮುಂದೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಇನ್ನೊಂದು ಕಡೆ, ಕ್ಯಾಪ್ಟನ್ಸಿ ರೂಮ್ನ್ನು ಬೇಕಾಬಿಟ್ಟಿ ಉಪಯೋಗಿಸಿರುವ ವಿಚಾರಕ್ಕೆ ಸುದೀಪ್ ಅವರು ಗರಂ ಆಗಿದ್ದು, ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆ ಮೂಲಕ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಗಿಲ್ಲಿ ಅವರು ಈ ವಾರ ಕ್ಯಾಪ್ಟನ್ ರೂಮ್ನಲ್ಲಿ ಬೇಕಾಬಿಟ್ಟಿಯಾಗಿ ಮಲಗಿಕೊಂಡು, ಹಾಯಾಗಿ ಇದ್ದರು. ಇದಕ್ಕೆ ಕಿಚ್ಚ ಅವರು, “ಕ್ಯಾಪ್ಟನ್ಗೆ ಇಲ್ಲಿ ಮಾರ್ಯದೆ ಇಲ್ಲ, ಕ್ಯಾಪ್ಟನ್ ರೂಮ್ಗಂತೂ ಮರ್ಯಾದೆನೇ ಇಲ್ಲ. ಅಲ್ವಾ ಗಿಲ್ಲಿ, ಈ ಸಲಿ ಒಂದು ಮಟ್ಟಕ್ಕೆ ಮೇಲೆ ಹೋಗಿ ಮಲಗಿಕೊಂಡು ಬಿಟ್ರಿ. ಕ್ಯಾಪ್ಟನ್ ರೂಮ್ನಲ್ಲಿರುವ ಸೌಕರ್ಯಕ್ಕೊಂದು ಬೆಲೆಯಿದೆ. ನಿಮಗೆ ರೂಮ್ ಬಗ್ಗೆ ಕೇರ್ಲೆಸ್ ಇದೆ ಅಂದ್ರೆ, ರೂಲ್ಸ್ ಫಾಲೋ ಹೇಗಾಗುತ್ತದೆ” ಎಂದು ಕಿಚ್ಚ ಪ್ರಶ್ನಿಸಿದ್ದಾರೆ.
ಇಷ್ಟು ಸೀಸನ್ನಲ್ಲಿ ಒಂದು ಸಲ ನಡೆದಿತ್ತು. ಈಗ ಎರಡನೇ ಸಲಿ ನಡೆಯುತ್ತಿದೆ. ಆ ರೂಮ್ಗೆ ಈಗ ಬೀಗ ಬೀಳುತ್ತದೆ ಎಂದು ಕಿಚ್ಚ ಹೇಳಿದ್ದಾರೆ.
ರೂಲ್ಸ್ ಬ್ರೇಕ್ ಮಾಡಿದ ಗಿಲ್ಲಿಯಿಂದಾಗಿ ಇಡೀ ಕ್ಯಾಪ್ಟನ್ ರೂಮ್ಗೆ ಬೀಗ ಬಿದ್ದಿದೆ.




